ನವದೆಹಲಿ: ವಿರಾಟ್ ಕೊಹ್ಲಿ ಟೀಂ ಇಂಡಿಯಾದ ನಾಯಕನಾಗಿ ಸಾಧಿಸಿದ್ದೇನು ಇಲ್ಲ ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಅತ್ಯುತ್ತಮ ಬ್ಯಾಟ್ಸ್ ಮನ್. ಆದರೆ ಟೀಂ ಇಂಡಿಯಾ ನಾಯಕನಾಗಿ ಕೊಹ್ಲಿಯ ಸಾಧನೆ ಶೂನ್ಯ ಎಂದು ಗಂಭೀರ್ ಹೇಳಿದ್ದಾರೆ.
ವೈಯಕ್ತಿಕ ಸಾಧನೆಗಿಂತ ತಂಡಕ್ಕಾಗಿ ಆಡಬೇಕಿದೆ. ಇನ್ನು ನಾಯಕನಾಗಿ ತಂಡಕ್ಕೆ ಪ್ರಮುಖ ಸರಣಿಗಳನ್ನು ಗೆಲ್ಲಿಸಿಕೊಡಬೇಕು. ಇಲ್ಲದಿದ್ದರೆ ಅವನೆಂತಾ ನಾಯಕ ಎಂದು ಹೇಳಿದ್ದಾರೆ.
ಐಸಿಸಿ ಆಯೋಜಿಸುವ ಪ್ರಮುಖ ಟೂರ್ನಿಗಳಾದ ಚಾಂಪಿಯನ್ಸ್ ಟ್ರೋಫಿ, ವಿಶ್ವಕಪ್ ನಂತ ಟೂರ್ನಿಗಳನ್ನು ಕೈಚೆಲ್ಲಿ ಕುಳಿತ್ತಿದ್ದಾರೆ. ಕೊಹ್ಲಿ ತಮ್ಮ ನಾಯಕದ 2017ರ ಚಾಂಪಿಯನ್ಸ್ ಟ್ರೋಫಿ ಮತ್ತು 2019ರ ವಿಶ್ವಕಪ್ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ಅವರ ನಾಯಕತ್ವ ಶೂನ್ಯ ಎಂದು ಹೇಳಬಹುದಾಗಿದೆ ಎಂದರು.
Follow us on Social media