ಬೆಂಗಳೂರು: 2018 ರಲ್ಲಿ ಜೆಡಿಎಸ್ ಜೊತೆಗೆ ಸಂಬಂಧ ಬೆಳೆಸಿ ಮೈತ್ರಿ ಸರ್ಕಾರ ರಚಿಸಿದ್ದು ಹೈಕಮಾಂಡ್ ನಿರ್ಧಾರವಾಗಿತ್ತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಭಾನುವಾರ ಮಾತನಾಡಿದ ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಅವರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ತಪ್ಪು ಮಾಡಿಬಿಟ್ಟೆ, ನಾನು 12 ವರ್ಷಗಳಿಂದ ಸಂಪಾದಿಸಿಕೊಂಡು ಬಂದಿದ್ದ ಗುಡ್ ವಿಲ್ ಕಾಂಗ್ರೆಸ್ ಜೊತೆ ಸರ್ಕಾರ ರಚಿಸಿ ನಾಶವಾಯಿತು ಎಂದು ಕುಮಾರಸ್ವಾಮಿ ಆರೋಪಿಸಿದ್ದರು.
ರಾಜ್ಯದಲ್ಲಿ ಬಿಜೆಪಿಗೆ 105 ಸ್ಥಾನ ಬರಲು ಸಿದ್ದರಾಮಯ್ಯ ಕಾರಣ. ನಮ್ಮ ಪಕ್ಷವನ್ನು ಬಿ ಟೀಂ ಎಂದು ಪದೇ ಪದೇ ಹೇಳಿ ಬಿಜೆಪಿಗೆ ಹೆಚ್ಚು ಸ್ಥಾನ ಬರುವಂತೆ ಮಾಡಿದರು ಎಂದು ಆರೋಪಿಸಿದ್ದರು.
ನಮ್ಮ ಪಕ್ಷ 70 ಶಾಸಕರನ್ನು ಹೊಂದಿತ್ತು, ಬಿಜೆಪಿಯನ್ನು ಅಧಿಕಾರಕ್ಕೆ ಬರುವುದನ್ನು ತಡೆಯಲು ಹೈಕಮಾಂಡ್ ಜೆಡಿಎಸ್ ಗೆ ಬೆಂಬಲ ನೀಡಲು ನಿರ್ಧರಿಸಿತ್ತು. ಆದರೆ ನಾನಲ್ಲ, ಪಕ್ಷದ ಹೈಕಮಾಂಡ್ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರ ಜೊತೆ ಮಾತನಾಡಿ ಮೈತ್ರಿ ಮಾಡಿಕೊಂಡಿತ್ತು, ನಾನು ಒಂದು ಮಾತನ್ನು ಆಡಿಲ್ಲ ಎಂದು ಸ್ಪಷ್ಟ ಪಡಿಸಿದರು.
ನಾನು ಕುಮಾರಸ್ವಾಮಿ ಮತ್ತು ದೇವೇಗೌಡ ಅವರನ್ನು ಭೇಟಿ ಮಾಡಿಲ್ಲ, ನಾನು ಸರ್ಕಾರ ರಚಿಸುವ ಸಂಬಂಧ ಅವರನ್ನು ಆಹ್ವಾನಿಸಿಲ್ಲ, ಇನ್ನೂ ಟ್ರಾಪ್ ಮಾಡುವುದು ಎಲ್ಲಿಂದ ಎಂದು ಪ್ರಶ್ನೆ ಮಾಡಿದ್ದಾರೆ.
ಜೆಡಿ (ಎಸ್) ಯಾವಾಗಲೂ ತನ್ನ ಎದುರಾಳಿ ಕಾಂಗ್ರೆಸ್ ಎಂದು ಪರಿಗಣಿಸುತ್ತಾರೆ, ಆದರೆ ಬಿಜೆಪಿ ಮೃದುವಾದ ನಿಲುವನ್ನು ಇಟ್ಟುಕೊಂಡಿಲ್ಲ ಎಂದು ಪ್ರತಿಪಕ್ಷದ ನಾಯಕ ಆರೋಪಿಸಿದ್ದಾರೆ.
ನಾನು 2006ರಲ್ಲಿ ಹಿಂದೆ ಸಿಎಂ ಆಗಿದ್ದಾಗ ಉತ್ತಮ ಹೆಸರು ಮಾಡಿದ್ದೆ. ನನಗೆ ಬಂದಿದ್ದ ಉತ್ತಮ ಹೆಸರನ್ನು ಸಿದ್ದರಾಮಯ್ಯ ಅಂಡ್ ಟೀಂ ಹಾಳು ಮಾಡಿತು. ಪ್ರೀಪ್ಲ್ಯಾನ್ ಮಾಡಿ ನನ್ನ ಹೆಸರನ್ನು ಹಾಳು ಮಾಡಿದರು ಎಂದು ಕುಮಾರಸ್ವಾಮಿ ದೂರಿದ್ದಾರೆ.

Follow us on Social media