ಮಂಗಳೂರು : ನಗರದ ವಿವಿಧ ಫೀಡರ್‌ಗಳಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದರಿಂದ ಜೂ.5ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ನಿಲುಗಡೆಯಾಗಲಿದ್ದು, ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.
ಜೂ.5ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ 33/11 ಕೆ.ವಿ. ಕದ್ರಿ ಉಪಕೇಂದ್ರದಿಂದ ಹೊರಡುವ 11ಕೆವಿ ಕದ್ರಿ ಟೆಂಪಲ್ ಫೀಡರ್‌ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.
ಇದರಿಂದ ನಗರದ ಅಲ್ವಾರಿಸ್ ರೋಡ್, ಕೈಬಟ್ಟಲ್, ಜಾರ್ಜ್ ಮಾರ್ಟಿಸ್ ರೋಡ್, ಟೆಂಪಲ್ ರೋಡ್, ಮಂಜುಶ್ರೀ ಲೇಔಟ್, ಕದ್ರಿ ಟೆಂಪಲ್ ನ್ಯೂರೋಡ್, ಕದ್ರಿ ಕಂಬಳ ರೋಡ್, ಸರ್ಕ್ಯೂಟ್ ಹೌಸ್ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.
Follow us on Social media