ಜಾರ್ಖಂಡ್ : ಜಾರ್ಖಂಡ್ ನ ಹಜಾರಿಬಾಗ್ ಜಿಲ್ಲೆಯ ಇಚ್ಚಾಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾಲ ಪಾವತಿ ಮಾಡಿಲ್ಲ ಎಂದು ಸಾಲ ವಸೂಲಾತಿಗೆ ಬಂದ ಸಿಬ್ಬಂದಿಗಳು ಮನೆಯಲ್ಲಿದ್ದ ಗರ್ಭಿಣಿ ಮಹಿಳೆಯ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಲೆಗೈದಿರುವ ಘಟನೆ ನಡೆದಿದೆ.
- ಖಾಸಗಿ ಫೈನಾನ್ಸ್ ವೊಂದರಲ್ಲಿ ಬಡ ಕುಟುಂಬವೊಂದು ಕೃಷಿ ಮಾಡಲು ಸಾಲ ಪಡೆದುಕೊಂಡಿದ್ದು, ಸಾಲ ವಸೂಲಾತಿಗೆಂದು ರೈತನ ಮನೆಗೆ ಖಾಸಗಿ ಫೈನಾನ್ಸ್ ಕಂಪನಿಯ ಏಜೆಂಟರು ಬಂದಿದ್ದಾರೆ. ಈ ವೇಳೆ ರೈತ ಹಾಗೂ ಏಜೆಂಟ್ ನಡುವೆ ವಾಗ್ವಾದ ನಡೆದಿದ್ದು, ಕೋಪಗೊಂಡ ಏಜೆಂಟ್ ರೈತನ ಮನೆಯಲ್ಲಿದ್ದ ಟ್ರ್ಯಾಕ್ಟರ್ ವಶಕ್ಕೆ ಪಡೆಯಲು ಮುಂದಾಗಿದ್ದಾನೆ, ಈ ವೇಳೆ ರೈತನ ಮೂರು ತಿಂಗಳ ಗರ್ಭಿಣಿ ಮಗಳು ಟ್ರ್ಯಾಕ್ಟರ್ ಮುಂದೆ ಅಡ್ಡ ಬಂದಿದ್ದಾಳೆ. ಆಕೆಯನ್ನೂ ಲೆಕ್ಕಿಸದೆ ಮೇಲೆಯೇ ಟ್ರ್ಯಾಕ್ಟರ್ ಹರಿಸಿದ್ದಾನೆ.ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಫೈನಾನ್ಸ್ ಕಂಪನಿಯ ರಿಕವರಿ ಏಜೆಂಟ್ ಹಾಗೂ ಮ್ಯಾನೇಜರ್ ಸೇರಿದಂತೆ ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.