ನವದೆಹಲಿ: ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಸೇನಾ ಬೆಂಗಾವಲು ಪಡೆ ಮೇಲೆ ಭಯೋತ್ಪಾದಕರ ದಾಳಿ ನಡೆದಿದ್ದು ಓರ್ವ ಯೋಧನಿಗೆ ಗಾಯಗಳಾಗಿವೆ.
ಗಾಯಗೊಂಡ ಯೋಧನನ್ನು ಶ್ರೀನಗರದಲ್ಲಿರುವ ಬೇಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
30 ಸಿಬ್ಬಂದಿಗಳಿದ್ದ ಮೂರು ಸೇನಾ ಬೆಂಗಾವಲು ವಾಹನ ಬಾರಾಮುಲ್ಲಾದಿಂದ ಗುಲ್ಮಾರ್ಗ್ ಗೆ ತೆರಳುತ್ತಿದ್ದಾಗ ಪಟ್ಟಣ್ ಏರಿಯಾದಲ್ಲಿ ಈ ದಾಳಿ ಸಂಭವಿಸಿದೆ.
ಮಧ್ಯಾಹ್ನ 2:15 ಕ್ಕೆ ಗುಂಡಿನ ದಾಳಿ ನಡೆದಿದೆ. ಎರಡನೇ ಬೆಂಗಾವಲು ಪಡೆ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ.
Follow us on Social media