Breaking News

ಜಗತ್ತಿನಲ್ಲಿ ಕೊರೋನಾ ರಣಕೇಕೆ: ಕೊರೋನಾ 63 ಲಕ್ಷ ದಾಟಿದ ಸೋಂಕಿತರ ಸಂಖ್ಯೆ, 3.76 ಲಕ್ಷ ಸಾವು, 7ನೇ ಸ್ಥಾನದಲ್ಲಿ ಭಾರತ!

ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ಗೆ ಜಗತ್ತು ತತ್ತರಿಸಿದ್ದು ಸೋಂಕಿತರ ಸಂಖ್ಯೆ 63 ಲಕ್ಷದಾಟಿದ್ದು, 3.76 ಲಕ್ಷಕ್ಕೂ ಹೆಚ್ಚು ಜನರು ಈ ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದ್ದಾರೆ.

ವಿಶ್ವಾದ್ಯಂತ 63,30,069 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, 3,76,005 ಜನರು ಸಾವನ್ನಪ್ಪಿದ್ದಾರೆ. ಇನ್ನು 28.83 ಲಕ್ಷ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆಯಲ್ಲಿ ಅಮೆರಿಕ ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿದೆ. ಸೋಂಕಿತರ ಸಂಖ್ಯೆಯಲ್ಲಿ ಬ್ರೆಜಿಲ್ ಎರಡನೇ ಮತ್ತು ರಷ್ಯಾ ಮೂರನೇ ಸ್ಥಾನದಲ್ಲಿದೆ. ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಬ್ರಿಟನ್ ಎರಡು, ಇಟಲಿ ಮೂರನೇ ಸ್ಥಾನದಲ್ಲಿದೆ.

ಭಾರತದಲ್ಲಿಯೂ ಕರೋನಾ ವೈರಸ್ ಹರಡುತ್ತಿದೆ ಮತ್ತು ಇದು ವಿಶ್ವದಾದ್ಯಂತ ಅತಿ ಹೆಚ್ಚು ಸೋಂಕುಗಳನ್ನು ಹೊಂದಿರುವ ದೇಶಗಳಲ್ಲಿ ಏಳನೇ ಸ್ಥಾನವನ್ನು ತಲುಪಿದೆ. ಭಾರತದಲ್ಲಿ 1,98,317 ಜನರು ಬಾಧಿತರಾಗಿದ್ದು, 5,608 ಜನರು ಸಾವನ್ನಪ್ಪಿದ್ದಾರೆ.

ಅಮೆರಿಕದಲ್ಲಿ ಈವರೆಗೆ 18,46,123 ಸೋಂಕಿತರಿದ್ದು, 1,06,504 ಜನರು ಸಾವನ್ನಪ್ಪಿದ್ದಾರೆ. ಬ್ರೆಜಿಲ್ ನಲ್ಲಿ ಸೋಂಕಿತರ ಸಂಖ್ಯೆ ಐದು ಲಕ್ಷದ ದಾಟಿದೆ. ಒಟ್ಟಾರೆ 29,534 ಜನರು ಸಾವನ್ನಪ್ಪಿದ್ದಾರೆ.

ರಷ್ಯಾದಲ್ಲಿ 4,14,878 ಜನರು ಸೋಂಕಿಗೆ ಒಳಗಾಗಿದ್ದು, 4,855 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಂಗ್ಲೆಂಡ್ ನಲ್ಲಿ 2,76,332 ಜನರು ಸೋಂಕಿಗೆ ಒಳಗಾಗಿದ್ದು, 39,945 ಜನರು ಸಾವನ್ನಪ್ಪಿದ್ದಾರೆ. ಇನ್ನು ಇಟಲಿಯಲ್ಲಿ ಈವರೆಗೆ 33,475 ಜನರು ಸಾವನ್ನಪ್ಪಿದರೆ, 2,33,197 ಜನರು ಸೋಂಕಿಗೆ ಒಳಗಾಗಿದ್ದಾರೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×