ನವದೆಹಲಿ: ಟಿಕ್ ಟಾಕ್ ಸೇರಿದಂತೆ ಚೀನಾದ ಹಲವು ಆ್ಯಪ್ ಗಳನ್ನು ಭಾರತ ನಿಷೇಧ ಮಾಡಿದ ಬೆನ್ನಲ್ಲೇ ಇದೀಗ ಅಮೆರಿಕಾ ಮತ್ತು ಜಪಾನ್ ಟಿಕ್ ಟಾಕ್ ಕುರಿತು ತನಿಖೆ ಆರಂಭಿಸಿದೆ.
ರಾಷ್ಟ್ರೀಯ ಭದ್ರತೆಗೆ ಧಕ್ಕೆ ಒದಗುವ ಸಾಧ್ಯತೆ ಹಿನ್ನೆಲೆಯಲ್ಲಿ ಟಿಕ್ ಟಾಕ್ ಆ್ಯಪ್ ಕುರಿತು ತನಿಖೆ ಆರಂಭಿಸಿರುವುದಾಗಿ ಅಮೆರಿಕಾದ ವಿತ್ತ ಕಾರ್ಯದರ್ಶಿ ಸ್ಟೀವ್ ಮ್ನುಚಿನ್ ತಿಳಿಸಿದ್ದಾರೆ.
ತನಿಖೆಯ ವರದಿಯನ್ನು ವಾರದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವರದಿ ಸಲ್ಲಿಸಲಾಗುವುದು ಎಂದು ಸ್ಟೀವ್ ಹೇಳಿದ್ದಾರೆ.
ಇನ್ನು ಅಮೆರಿಕಾದ ತನಿಖೆ ಕುರಿತು ಮಾತನಾಡಿರುವ ಟಿಕ್ ಟಾಕ್ ಅಧಿಕಾರಿಗಳು, ತಮ್ಮ ಆ್ಯಪ್ ನ ಭದ್ರತಾ ಮೂಲಸೌಕರ್ಯವನ್ನು ಹೆಚ್ಚಿಸುವ ಜತೆಗೆ ಸುರಕ್ಷತೆಯ ಅಂಶಗಳಿಗೆ ಹೆಚ್ಚು ಒತ್ತು ನೀಡುವ ಸಲುವಾಗಿ ಶ್ರಮಿಸುತ್ತಿರುವುದಾಗಿ ಹೇಳಿದ್ದಾರೆ.
Follow us on Social media