ಕೋಲ್ಕತಾ : ಕೊರೋನಾ ವೈರಸ್ ಸೋಂಕು ವ್ಯಾಪಿಸಿರುವ ಹಿನ್ನೆಲೆಯಲ್ಲಿ ಹರಳು ಮತ್ತು ಚಿನ್ನಾಭರಣ ವಲಯ ಸಂಪೂರ್ಣ ಸ್ಥಗಿತಗೊಂಡಿದೆ.
ದೇಶದ ಜಿಡಿಪಿಗೆ ಈ ವಲಯಕ್ಕೆ ಶೇ. 7ರಷ್ಟು ಕೊಡಗೆ ನೀಡುತ್ತಿದ್ದು, 5 ಮಿಲಿಯನ್ ಗೂ ಹೆಚ್ಚು ಜನರಿಗೆ ಉದ್ಯೋಗ ನಿಡುತ್ತಿದೆ. ಈ ವಲಯ ಪ್ರಮುಖವಾಗಿ ವಿವಾಹದ ಕಾಲದಲ್ಲಿ ಅತಿ ಹೆಚ್ಚು ಬೇಡಿಕೆಯಲ್ಲಿರುತ್ತಿತ್ತು. ಆದರೆ, ಈ ಬಾರಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ವಿವಾಹಗಳು ಮುಂದೂಡಲ್ಪಟ್ಟಿರುವುದರಿಂದ ವಿವಾಹದ ಖರೀದಿ ಕೂಡ ಸ್ಥಗಿತಗೊಂಡಿದೆ.
ಭಾರತದಲ್ಲಿ ಸರಾಸರಿ 850 ಟನ್ ಚಿನ್ನ ಮತ್ತು ವಜ್ರದ ಬೇಡಿಕೆಯಿರುತ್ತಿತ್ತು. 2020ರಲ್ಲಿ ಕೂಡ 700ರಿಂದ 800 ಟನ್ ಚಿನ್ನ ಹಾಗೂ ವಜ್ರದ ಬೇಡಿಕೆಯಿತ್ತು.