ಚಿತ್ರದುರ್ಗ : ಗುಜರಾತ್ ನಿಂದ ಚಿತ್ರದುರ್ಗದಕ್ಕೆ ಆಗಮಿಸಿದ್ದ ತಬ್ಲಿಘಿಗಳಲ್ಲಿ ಮತ್ತೆ ಕೊರೋನಾ ಸೋಂಕು ಪತ್ತೆಯಾಗಿದ್ದು ಗ್ರೀನ್ ಜೋನ್ ನಲ್ಲಿದ್ದ ಕೋಟೆನಾಡಿಗೆ ಇದೀಗ ಕಂಟಕ ಶುರುವಾಗಿದೆ.
ದೆಹಲಿಯಲ್ಲಿ ನಡೆದಿದ್ದ ನಿಜಾಮುದ್ದೀನ್ ಜಮಾತ್ ಗೆ ತೆರಳಿದ್ದ 15 ಮಂದಿ ಪೈಕಿ ನಾಲ್ವರು ತಬ್ಲಿಘಿಗಳು ಕೊರೋನಾಗೆ ತುತ್ತಾಗಿದ್ದರು. ನಂತರ ಅವರು ಗುಜರಾತ್ ಗೆ ತೆರಳಿದ್ದು ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಗುಣಮುಖರಾಗಿದ್ದರಿಂದ ಅವರು ರಾಜ್ಯಕ್ಕೆ ಆಗಮಿಸಿದ್ದರು. ತುಮಕೂರಿನ 18 ಮತ್ತು ಚಿತ್ರದುರ್ಗದ 15 ತಬ್ಲಿಘಿಗಳು ಒಟ್ಟಾರೆ 33 ಜನರು ಮಾರ್ಚ್ 5ರಂದು ಒಂದೇ ಬಸ್ ನಲ್ಲಿ ಚಿತ್ರದುರ್ಗಕ್ಕೆ ಆಗಮಿಸಿರುವುದು ಇದೀಗ ಆತಂಕಕ್ಕೆ ಕಾರಣವಾಗಿದೆ.
ಚಿತ್ರದುರ್ಗಕ್ಕೆ ಆಗಮಿಸಿದ್ದ 15 ಜನರ ಪೈಕಿ ಇದೀಗ 3 ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ. ಮೂವರಲ್ಲಿ ಸೋಂಕು ಪತ್ತೆಯಾಗಿರುವುದಾಗಿ ಡಿಹೆಚ್ ಒ ಡಾ. ಪಾಲಾಕ್ಷರಿಂದ ಮಾಹಿತಿ ನೀಡಿದ್ದಾರೆ.
ಸದ್ಯ ಈ ಮೂವರನ್ನು ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇನ್ನುಳಿಂದ 12 ಮಂದಿ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು ಅವರನ್ನು ಕ್ವಾರಂಟೈನ್ ಮಾಡಲಾಗಿದೆ.
ಕೊರೋನಾ ಸೋಂಕಿತರ ಜೊತೆ ಪ್ರಯಾಣಿಸಿದ್ದ ತುಮಕೂರಿನ 18 ಮಂದಿಗೆ ಕೊರೋನಾ ಸೋಂಕು ಹರಡುವ ಆತಂಕ ಶುರವಾಗಿದ್ದು ತುಮಕೂರು ಜಿಲ್ಲಾಡಳಿತಕ್ಕೆ ತಲೆ ನೋವು ಶುರುವಾಗಿದೆ.
Follow us on Social media