ಚಿಕ್ಕೋಡಿ: ಲಾಕ್ ಡೌನ್ ಹಿನ್ನೆಲೆ ಅಂತರಾಜ್ಯಕ್ಕೆ ಹೋಗಲು ಜನರು ಹರಸಾಹಸ ಪಡುತ್ತಿದ್ದಾರೆ. ತನ್ನ ಊರಿಗೆ ಹೋಗಬೇಕು ಎಂದು ಕಾರ್ಮಿಕನೋರ್ವ ನಡೆದುಕೊಂಡು ಹೋಗುವಾಗ ಏಕಾಏಕಿ ಮೃತಪಟ್ಟ ಘಟನೆ ಇಂದು ಚಿಕ್ಕೋಡಿಯಲ್ಲಿ ನಡೆದಿದೆ.
ಜಾರ್ಖಂಡ್ ಮೂಲದ ಬಾಬುಲಾಲ ಸಿಂಗ್ (45) ಮೃತ ದುರ್ದೈವಿ. ಜಾರ್ಖಂಡ್ ನ 13 ಜನರು ಖಾನಾಪುರದಿಂದ ಜಾರ್ಖಂಡ್ ಕಡೆಗೆ ನಡೆದುಕೊಂಡು ಹೋಗುವ ದುಸ್ಸಾಹಸ ಮಾಡಿದರು. ನಡೆದುಕೊಂಡು ಚಿಕ್ಕೋಡಿಗೆ ಬರುವಷ್ಟರಲ್ಲಿ ಬಾಬುಲಾಲ ಸಿಂಗ್ ಕುಸಿದು ಬಿದ್ದಿದ್ದಾನೆ. ನಂತರ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಅಲಿಂದಲೇ ನಿಖರವಾದ ಮಾಹಿತಿ ಹೊರಬರಬೇಕಿದೆ. ಇನ್ನೂ ಸ್ಥಳಕ್ಕೆ ಚಿಕ್ಕೋಡಿ ತಹಶಿಲ್ದಾರರ ಸುಭಾಷ್ ಸಂಪಗಾಂವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Follow us on Social media