ಬೆಳ್ತಂಗಡಿ : ಏಕಾಏಕಿ ಚುರುಕು ಪಡೆದು ಅಬ್ಬರಿಸುತ್ತಿರುವ ಮುಂಗಾರಿನಿಂದ ಹಲವೆಡೆ ಅನಾಹುತಗಳು ನಡೆದ ಬಗ್ಗೆ ವರದಿಯಾಗುತ್ತಿತ್ತು, ಗುರುವಾರ ರಾತ್ರಿ ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿತಗೊಂಡು ಸಂಚಾರಕ್ಕೆ ತೊಡಕಾಗಿದೆ.
ಈಗಾಗಲೇ ಚಾರ್ಮಾಡಿ ಘಾಟಿಯಲ್ಲಿ ರಾತ್ರಿ ಸಂಚಾರ ನಿಷೇಧಗೊಂಡಿದ್ದು, ಅಲೆಖಾನ್ ಸಮೀಪ ಗುಡ್ಡ ಕುಸಿತಗೊಂಡ ಪರಿಣಾಮ ಮುಂಜಾನೆ ವೇಳೆ ವಾಹನ ಸಂಚಾರಕ್ಕೆ ಮತ್ತೆ ಅಡ್ಡಿಯಾಗಿದೆ. ಸದ್ಯ ಸ್ಥಳದಲ್ಲಿ ತೆರವು ಕಾರ್ಯಾಚರಣೆ ಸಾಗುತ್ತಿದ್ದು ಒಂದು ಜಿಸಿಬಿ ನಿಯೋಜಿಸಲಾಗಿದೆ.
ಇನ್ನು ಕೊಟ್ಟಿಗೆಹಾರ ಬಳಿಯೂ ಭಾರೀ ಮಳೆಯಿಂದ ಚಾರ್ಮಾಡಿ ಘಾಟ್‍ನ ಮಣ್ಣು ರಸ್ತೆ ಕುಸಿದಿದೆ. ರಸ್ತೆಯ ಮೇಲೆ ಬಂಡೆಗಳು, ಮರಗಳು ಉರುಳಿ ಬೀಳುತ್ತಿದ್ದು, ಸವಾರರು ಎಚ್ಚರಿಕೆಯಾಗಿ ಪ್ರಯಾಣಿಸಬೇಕಾಗಿದೆ
ಕಳೆದ ವರ್ಷವೂ ಆಗಸ್ಟ್ ತಿಂಗಳಿನಲ್ಲಿ ಹೆಚ್ಚಿನ ಮಳೆಯಿಂದಾಗಿ ಚಾರ್ಮಾಡಿ ಘಾಟ್ ನಲ್ಲಿ ಗುಡ್ಡ ಕುಸಿತ ಸಂಭವಿಸಿತ್ತು. ಇದೀಗ ಮತ್ತೆ ಗುಡ್ಡ ಕುಸಿತದ ಬಗ್ಗೆ ವರದಿಯಾಗುತ್ತಿದೆ.
Follow us on Social media