Breaking News

ಗ್ರೀನ್ ಝೋನ್ ಎಂದು ಘೋಷಿಸಲ್ಪಟ್ಟಿದ್ದ ಗೋವಾ ರಾಜ್ಯದಲ್ಲಿ 7 ಹೊಸ ಕೊರೋನಾ ಸೋಂಕು ಪ್ರಕರಣ!

ಪಣಜಿ : ಗೋವಾ ರಾಜ್ಯದಲ್ಲಿ 7 ಮಂದಿ ಕೊರೋನಾ ಶಂಕಿತರ ರಕ್ತದ ಮಾದರಿಯನ್ನು ಪರೀಕ್ಷಿಸಿದಾಗ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಹೇಳಿದ್ದಾರೆ.

ಮೇ 1ರಿಂದ ಯಾವುದೇ ಹೊಸ ಕೊರೋನಾ ಪ್ರಕರಣಗಳು ವರದಿಯಾಗದ್ದರಿಂದ ಗೋವಾ ರಾಜ್ಯವನ್ನು ಈ ಹಿಂದೆ ಕೇಂದ್ರ ಸರ್ಕಾರ ಹಸಿರು ವಲಯ ಎಂದು ಗುರುತಿಸಿತ್ತು. ಆದರೆ ಗೋವಾ ಮೆಡಿಕಲ್ ಕಾಲೇಜಿನಲ್ಲಿ 7 ಮಂದಿ ಶಂಕಿತರ ಪರೀಕ್ಷೆ ಮಾಡಿಸಿದಾಗ ಸೋಂಕು ದೃಢಪಟ್ಟಿದೆ ಎಂದು ರಾಣೆ ತಿಳಿಸಿದ್ದಾರೆ.

ಕೋವಿಡ್-19 ಚಿಕಿತ್ಸೆಗೆ ಮೀಸಲಾಗಿರುವ ಆಸ್ಪತ್ರೆಯಲ್ಲಿ ಇದೀಗ ಮೂವರು ಮಹಿಳೆಯರು ಸೇರಿದಂತೆ 7 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಂದೇ ಕುಟುಂಬದ ಐವರು ಸದಸ್ಯರ ಕಾರು ಚಾಲಕ ಮುಂಬೈಗೆ ಹೋಗಿ ಬಂದಿದ್ದು ಅಲ್ಲಿಂದ ಸೋಂಕು ಬಂದಿರಬಹುದು ಎಂದು ಹೇಳಲಾಗುತ್ತಿದೆ. ಈ ಐದು ಮಂದಿಯಲ್ಲಿ ಒಂದು ವರ್ಷದ ಮಗು ಕೂಡ ಸೇರಿದೆ.


7ನೇ ವ್ಯಕ್ತಿ ಟ್ರಕ್ ಚಾಲಕನಾಗಿದ್ದು ಈತ ಗುಜರಾತ್ ನಿಂದ ಸಾಮಾನು ತಂದಿದ್ದ. ಅಲ್ಲಿಂದ ಸೋಂಕು ಒಕ್ಕರಿಸಿರಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.

ಗ್ರೀನ್ ವಲಯ ಎಂದು ಘೋಷಿಸಿದ್ದರಿಂದ ಗೋವಾ ರಾಜ್ಯದಲ್ಲಿ ಈ ತಿಂಗಳ ಆರಂಭದಿಂದ ಬಹುತೇಕ ಚಟುವಟಿಕೆಗಳು ಆರಂಭವಾಗಿದ್ದವು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×