ಬೆಂಗಳೂರು : ಗುಲ್ಬರ್ಗಾದಲ್ಲಿ ಇತ್ತೀಚಿಗೆ ಕೊರೋನಾ ಸೋಂಕಿನ ಮೃತಪಟ್ಟ ವೃದ್ಧ ವ್ಯಕ್ತಿಯ ಸಂಬಂಧಿಕನೋರ್ವನಲ್ಲಿ ಸೋಂಕು ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 7 ಕ್ಕೇರಿದಂತಾಗಿದೆ.
ಮೃತ ವ್ಯಕ್ತಿಯ ಆರೈಕೆ ಮಾಡುತ್ತಿದ್ದ ಸಂಬಂಧಿಕನ ವೈದ್ಯಕೀಯ ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಉಳಿದ ಮೂವರಲ್ಲಿ ಸೋಂಕು ಇಲ್ಲ ಎಂದು ತಿಳಿದುಬಂದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಡಾ. ಓಂ ಪ್ರಕಾಶ್ ಪಾಟೀಲ್ ಹೇಳಿಕೆ ನೀಡಿದ್ದಾರೆ.