ಗುರುಪುರ : ರಾ.ಹೆ. 169ರ ಗುರುಪುರದಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ಹಳೆ ಸೇತುವೆಗೆ ಪರ್ಯಾಯವಾಗಿ ನಿರ್ಮಾಣಗೊಳ್ಳುತ್ತಿರುವ ಹೊಸ ಸೇತುವೆ ಕಾಮಗಾರಿಯು ಸಂಪೂರ್ಣ ಮುಗಿದಿದ್ದು, ಜೂ.5ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಮೂಲಗಳು ತಿಳಿಸಿದೆ.
ಅಂದಾಜು 29.42 ಕೋ.ರೂ. ವೆಚ್ಚದ ಈ ಸೇತುವೆ ಕಾಮಗಾರಿಯು 2018ರ ಫೆಬ್ರವರಿಯಲ್ಲಿ ಆರಂಭಗೊಂಡಿತ್ತು. ಏಳು ಅಂಕಣಗಳಿರುವ ಸೇತುವೆಯ ಎರಡೂ ಪಾರ್ಶ್ವದಲ್ಲಿ ಪಾದಚಾರಿಗಳಿಗೆ ನಡೆದಾಡಲು ಹಾಗೂ ಎರಡೂ ತುದಿಯಲ್ಲಿ 500 ಮೀಟರ್ ಉದ್ದಕ್ಕೆ ರಸ್ತೆ ಅಗಲೀಕರಣ ಮಾಡಲಾಗಿದೆ. ಮೊಗರೋಡಿ ಕನ್‌ಸ್ಟ್ರಕ್ಷನ್ ಕಂಪೆನಿಯ ಸುಧಾಕರ ಶೆಟ್ಟಿ ಈ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿದ್ದರು ಎಂದು ಕಂಪೆನಿಯ ಮುಖ್ಯ ಇಂಜಿನಿಯರ್ ಶಿವಸುಬ್ರಹ್ಮಣ್ಯ ತಿಳಿಸಿದ್ದಾರೆ.
Follow us on Social media