ತಿರುವನಂತಪುರಂ : ಗಲ್ಫ್ ನಿಂದ ಕೇರಳಕ್ಕೆ ಬಂದಿದ್ದ ಇಬ್ಬರು ಭಾರತೀಯರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ವಿದೇಶಗಳಲ್ಲಿ ಸಿಲುಕಿದ ಭಾರತೀಯರನ್ನು ವಾಪಸ್ ಕರೆತರುವ ಕೇಂದ್ರ ಸರ್ಕಾರದ ಕಾರ್ಯಾಚರಣೆಯ ಭಾಗವಾಗಿ ಮೇ.07 ರಂದು ಅಬು ಧಾಬಿಯಿಂದ ಕೇರಳಕ್ಕೆ ವಾಪಸ್ಸಾಗಿದ್ದರು.
ಈ ಎರಡು ಪ್ರಕರಣಗಳ ಮೂಲಕ ಕೇರಳದಲ್ಲಿ ಕೊರೋನಾ ಪೀಡಿತರ ಸಂಖ್ಯೆ 505 ಜನರಿದ್ದು 17 ಜನರಿಗೆ ಚಿಕಿತ್ಸೆ ನಡೆಯುತ್ತಿದೆ. ಇಡುಕ್ಕಿಯಲ್ಲಿರುವ ಓರ್ವ ರೋಗಿ ಇಂದು ಗುಣಮುಖರಾಗಿದ್ದಾರೆ ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
Follow us on Social media