ನವದೆಹಲಿ: ಚಿನ್ನದ ದರ ದಿನದಿಂದ ದಿನಕ್ಕೆ ಗಗನಕ್ಕೇರುತ್ತಲೇ ಇದ್ದು, ಶೀಘ್ರದಲ್ಲೇ 10 ಗ್ರಾಂ ಚಿನ್ನ ರೂ.50,000 ಗಡಿ ದಾಟಲಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ ಮಂಗಳವಾರ ರೂ.761 ಏರಿಕೆಯಾಗಿದ್ದು, ರೂ.48,414ಕ್ಕೆ ತಲುಪಿದೆ.
ಮತ್ತೊಂದೆಡೆ ಮುಂಬೈ ಚಿನ್ನದ ಮಾರುಕಟ್ಟೆಯಲ್ಲಿ 10 ಗ್ರಾಂ ಶುದ್ಧ ಚಿನ್ನದ ದರ 47,540 ಹಾಗೂ ಆಭರಣ ಚಿನ್ನದ ದರ ರೂ.47,350 ಆಗಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಬೇಡಿಕೆ ಮತ್ತು ರುಪಾಯಿ ಮೌಲ್ಯ ಕುಸಿತ ಚಿನ್ನದ ದರ ಏರಿಕೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಇದೇ ವೇಳೆ ಒಂದು ಕೆಜಿ ಬೆಳ್ಳಿಯ ದರ ರೂ.1,308 ಏರಿಕೆಯಾಗಿದ್ದು, ರೂ.49,204 ಆಗಿದೆ.
Follow us on Social media