ಪುಣೆ : ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾದ ವಿರುದ್ಧ ಶ್ರಿಲಂಕಾ ಹದಿನಾರು ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ.
- ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಶೀಲಂಕಾ 6 ವಿಕೆಟ್ ಗಳ ನಷ್ಟಕ್ಕೆ 206 ರನ್ ಗಳಿಸಿತು. ಕುಸಲ್ ಮೆಂಡಿಸ್ 52, ಶನಕ 56, ಅಸಲಂಕ 37 ರನ್ ಸಿಡಿಸಿದರು.ಭಾರತ ಪರ ಉಮ್ರಾನ್ 3, ಅಕ್ಷರ್ 2 ವಿಕೆಟ್ ಪಡೆದರು.ಇನ್ನು ಲಂಕಾ ನೀಡಿದ ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲೇ ಪರದಾಡಿತು. ಇಶಾನ್ ಕಿಶಾನ್, ಗಿಲ್, ರಾಹುಲ್ ತ್ರಿಪಾಠಿ ಬಂದಷ್ಟು ವೇಗದಲ್ಲೇ ಫೆವೀಲಿಯನ್ ಸೇರಿದರು.
ಸೂರ್ಯಕುಮಾರ್ 51, ಅಕ್ಷರ್ ಪಾಟೇಲ್ 65 ರನ್ ಸಿಡಿಸಿ ಗೆಲುವಿನ ಭರವಸೆ ಮೂಶಿಸಿದರಾದರೂ, ಲಂಕಾ ದಾಳಿ ಎದುರಿಸಲಾಗದೆ ಭಾರತ ಶರಣಾಯಿತು.