ಬೆಂಗಳೂರು; ರಾಜ್ಯದಲ್ಲಿ ಕೊರೋನಾ ವೈರಸ್ ಪ್ರಭಾವ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಮತ್ತೆ 8 ಹೊಸ ಪ್ರಕರಣಗಳು ಮಂಗಳವಾರ ಬೆಳಕಿಗೆ ಬಂದಿವೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 520ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಕಲಬುರಗಿ ಜಿಲ್ಲೆಯಲ್ಲಿ ಮತ್ತೆ ಆರು ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.
425ನೇ ರೋಗಿಯ ಸಂಪರ್ಕದಲ್ಲಿದ್ದ 55 ವರ್ಷದ ವೃದ್ಧ, 40 ವರ್ಷದ ಮಹಿಳೆ, 43 ವರ್ಷದ ವ್ಯಕ್ತಿ, 28 ವರ್ಷದ ಯುವತಿ, 45 ವರ್ಷದ ಮಹಿಳೆ ಮತ್ತು 22 ವರ್ಷದ ಯುವತಿಯಲ್ಲಿ ಸೋಂಕು ದೃಢಪಟ್ಟಿದೆ.
ಇದರ ಜೊತೆಗೆ, ಗದಗದ 75 ವರ್ಷದ ವೃದ್ಧರಲ್ಲಿ ಕೂಡ ಸೋಂಕು ಪತ್ತೆಯಾಗಿದೆ. ಇವರು ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು.
ಜೊತೆಗೆ ಬಿಬಿಎಂಪಿಯ 135ನೇ ಕಂಟೈನ್ ಮೆಂಟ್ ವಲಯಕ್ಕೆ ಭೇಟಿನೀಡಿದ 48 ವರ್ಷದ ವ್ಯಕ್ತಿಯಲ್ಲಿ ಕೂಡ ಸೋಂಕು ದೃಢಪಟ್ಟಿದೆ.
ಸೋಮವಾರ ರಾತ್ರಿ ಕಲಬುರಗಿ ಜಿಲ್ಲೆಯ 57 ವರ್ಷದ ವ್ಯಕ್ತಿಯೊಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.
ಇದರಿಂದ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 520ಕ್ಕೆ ಏರಿಕೆಯಾಗಿದೆ. ಒಟ್ಟು 21 ಜನರು ಮೃತಪಟ್ಟಿದ್ದಾರೆ ಮತ್ತು 198 ಜನರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.
Follow us on Social media