ನವದೆಹಲಿ: ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಸೋಂಕಿತರ ಸಂಖ್ಯೆ 24,506ಕ್ಕೆ ಏರಿಕೆಯಾಗಿದೆ. ಅಲ್ಲದೆ, 775 ಮಂದಿ ಸಾವನ್ನಪ್ಪಿದ್ದಾರೆ.
ದೇಶದಲ್ಲಿ ಕೊರೋನಾ ವೈರಸ್ ತಲೆನೋವು ಒಂದೆಡೆಯಾದರೆ, ಮತ್ತೊಂದೆಡೆ ಆರ್ಥಿಕ ಸಂಕಷ್ಟ ಎದುರಾಗುತ್ತಿದೆ. ಮಹಾರಾಷ್ಟ್ರ ರಾಜ್ಯದಲ್ಲಿ ಈಗಾಗಲೇ ಆರ್ಥಿಕ ರಕ್ತಪಾತ ಆರಂಭವಾಗಿದೆ. ಇಲ್ಲಿನ ಅಬಕಾರಿ ಇಲಾಖೆಯಲ್ಲಿ ರೂ.2,000 ಕೋಟಿ ನಷ್ಟ ಎದುರಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಆಹಮದಾಬಾದ್, ಸೂರತ್, ಹೈದರಾಬಾದ್ ಹಾಗೂ ಚೆನ್ನೈನಲ್ಲಿ ವೈರಸ್ ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ನಡುವೆ 14 ದಿನಗಳಿಂದ ದೇಶದ ಸುಮಾರು 80 ಜಿಲ್ಲೆಗಳಲ್ಲಿ ಯಾವುದೇ ಹೊಸ ಪ್ರಕರಣಗಳು ಬೆಳಕಿಗೆ ಬಂದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಈ ನಡುವೆ ತಮಿಳುನಾಡಿನಲ್ಲಿ ವೈರಸ್ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಲಾಗಿದ್ದು, ಚೆನ್ನೈ, ಕೊಯಿಮತ್ತೂರು, ಮಧುರೈ ನಗರಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಲಾಕ್’ಡೌನ್ ಬಿಗಿಗೊಳಿಸಲಾಗಿದೆ.
ಇದರಂತೆ ನಿನ್ನೆಯಷ್ಟೇ ಶುಭಸುದ್ದಿಯೊಂದನ್ನು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ನೀಡಿದ್ದು, ಪ್ಲಾಸ್ಮಾ ಥೆರಪಿ ಉತ್ತಮ ಭರವಸೆ ಮೂಡಿಸುತ್ತಿದ ಎಂದು ಹೇಳಿದ್ದಾರೆ.
Follow us on Social media