ಬೀಜಿಂಗ್ : ಮಾರ್ಚ್ 5 (ಯುಎನ್‌ಐ)-ಚೀನಾದಲ್ಲಿ ಬುಧವಾರ 31 ಹೊಸ ಸಾವುಗಳೊಂದಿಗೆ ಕೊವಿದ್-19 ಎಂದು ಕರೆಯಲ್ಪಡುವ ಮಾರಣಾಂತಿಕ ಕೊರೊನಾವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ 3,012 ಕ್ಕೆ ಏರಿದ್ದು, ಒಟ್ಟಾರೆ ದೃಢಪಟ್ಟ ಪ್ರಕರಣಗಳ ಸಂಖ್ಯೆ ಬುಧವಾರದ ಅಂತ್ಯದ ವೇಳೆಗೆ 80,409 ಕ್ಕೆ ತಲುಪಿದೆ ಎಂದು ಆರೋಗ್ಯ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಕೊರೊನಾವೈರಸ್ ಸೋಂಕಿನ 139 ಹೊಸ ಪ್ರಕರಣಗಳ ವರದಿಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲಾ ಸಾವುಗಳು ಹುಬೈ ಪ್ರಾಂತ್ಯದಲ್ಲಿ ಸಂಭವಿಸಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ಚಿಕಿತ್ಸೆಯಿಂದ ಚೇತರಿಸಿಕೊಂಡ ನಂತರ ಬುಧವಾರ 2,189 ಜನರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದ್ದು, ತೀವ್ರತರವಾದ ಪ್ರಕರಣಗಳ ಸಂಖ್ಯೆ 464 ರಷ್ಟು ಇಳಿದು 5,952 ಕ್ಕೆ ತಲುಪಿದೆ.
ಚೇತರಿಸಿಕೊಂಡ ನಂತರ ಸುಮಾರು 52,045 ಜನರನ್ನು ಮನೆಗೆ ಕಳುಹಿಸಲಾಗಿದ್ದು, 25,352 ರೋಗಿಗಳು ಇನ್ನೂ ಸೋಂಕುನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.
522 ಜನರು ಇನ್ನೂ ವೈರಸ್ ಸೋಂಕಿಗೆ ಒಳಗಾಗಿರುವ ಶಂಕೆ ಇದೆ ಎಂದು ಆಯೋಗ ತಿಳಿಸಿದೆ.
ಬುಧವಾರದವರೆಗೆ ಹಾಂಕಾಂಗ್ ವಿಶೇಷ ಆಡಳಿತ ಪ್ರದೇಶದಲ್ಲಿ ಎರಡು ಸಾವು ಸೇರಿದಂತೆ 104 ಪ್ರಕರಣಗಳನ್ನು ದೃಢಪಡಿಸಲಾಗಿದೆ. ಮಕಾವೊ ನಲ್ಲಿ 10 ಪ್ರಕರಣಗಳು ದೃಢಪಟ್ಟರೆ, ತೈವಾನ್‌ನಲ್ಲಿ 42 ಪ್ರಕರಣಗಳು ವರದಿಯಾಗಿವೆ ಎಂದು ಆಯೋಗ ಹೇಳಿದೆ.
ಚೇತರಿಸಿಕೊಂಡ ನಂತರ ಹಾಂಗ್ ಕಾಂಗ್‌ನಲ್ಲಿ 43, ಮಕಾವೊದಲ್ಲಿ 9 ಮತ್ತು ತೈವಾನ್‌ನಲ್ಲಿ 12 ರೋಗಿಗಳನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ.
Source : UNI
Follow us on Social media