ನವದೆಹಲಿ: ಕೊರೋನಾವೈರಸ್ ಪ್ರೇರಿತ ಲಾಕ್‌ಡೌನ್‌ಗನಿಂದ ವ್ಯಾಪಾರ ನಷ್ಟವಾಗಿದ್ದ ಹಿನ್ನೆಲೆ ಜೂನ್ 2020 ಕ್ಕೆ ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ ಶೂ ತಯಾರಿಕೆ ಕಂಪನಿ ಬಾಟಾ ಇಂಡಿಯಾ ಲಿಮಿಟೆಡ್ ಗೆ ಬರೋಬ್ಬರಿ 100.88 ಕೋಟಿ ರೂ. ನಷ್ಟವಾಗಿದೆ,
ಒಂದು ವರ್ಷದ ಹಿಂದೆ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಕಂಪನಿಯು 100.97 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು ಎಂದು ಬಾಟಾ ಇಂಡಿಯಾ ಬಿಎಸ್ಇ ಫೈಲಿಂಗ್ ನಲ್ಲಿ ತಿಳಿಸಿದೆ.
ಪ್ರಸಕ್ತ ತ್ರೈಮಾಸಿಕದಲ್ಲಿ ಅದರ ಆದಾಯವು 84.69 ಶೇ. ಗೆ ಇಳಿದಿದ್ದು 135.07 ಕೋಟಿ ರೂ.ಗೆ ತಲುಪಿದೆ. ಕಳೆದ ಹಣಕಾಸು ವರ್ಷದಲ್ಲಿ ಇದೇ ತ್ರೈಮಾಸಿಕದಲ್ಲಿ 882.75 ಕೋಟಿ ರೂ. ಆಗಿತ್ತು.
“ಚಾಲ್ತಿಯಲ್ಲಿರಿವ ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಉಂಟಾದ ಅಡೆತಡೆಗಳಿಂದಾಗಿ 2020-21ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಸಂಸ್ಥೆಯ ವಹಿವಾಟು ತೀವ್ರ ಪರಿಣಾಮ ಎದುರುಸಿದೆ” ಎಂದು ಬಾಟಾ ಹೇಳಿದೆ.
ತ್ರೈಮಾಸಿಕದ ಕಾರ್ಯಾಚರಣೆಗಳಿಂದ ಅದರ ಆದಾಯವು “ಕಳೆದ ವರ್ಷ ಇದೇ ಅವಧಿಯಲ್ಲಿ ಹೋಲಿಸಿದರೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಲಾಕ್‌ಡೌನ್ ಆಗಿದ್ದರಿಂದ ಶೇಕಡಾ 85 ರಷ್ಟು ಕಡಿಮೆಯಾಗಿದೆ “ನಮ್ಮ ಗ್ರಾಹಕರು ಮತ್ತು ನೌಕರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಸರ್ಕಾರ ಮತ್ತು ನಮ್ಮ ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ನಾವು ನಮ್ಮ ಕಾರ್ಯಾಚರಣೆಯನ್ನು ಪುನಃ ಪ್ರಾರಂಭಿಸಿದ್ದೇವೆ. ಫಲಿತಾಂಶಗಳನ್ನುಇನ್ನಷ್ಟೇ ನೋಡಬೇಕಿದೆ., ”ಎಂದುಸಂಸ್ಥೆ ಹೇಳಿದೆ.
“ಹೆಚ್ಚುವರಿಯಾಗಿ, ನಾವು ಫ್ರ್ಯಾಂಚೈಸ್ ಸ್ಟೋರ್ ರೋಲ್ ಔಟ್ ನಲ್ಲಿ ನಮ್ಮ ಗಮನವನ್ನು ಹೆಚ್ಚಿಸಿದ್ದೇವೆ ಮತ್ತು ನಮ್ಮ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಲು ಮಲ್ಟಿಬ್ರಾಂಡ್ ಮಳಿಗೆಗಳಿಗೆ ನಮ್ಮ ವ್ಯಾಪ್ತಿಯನ್ನು ವಿಸ್ತರಿಸಿದ್ದೇವೆ. ಮಾರಾಟದ ಸುಧಾರಣೆ ಮುಂದುವರಿಯುತ್ತದೆ ಮತ್ತು ಮುಂಬರುವ ತ್ರೈಮಾಸಿಕದಲ್ಲಿ ಹಬ್ಬಗಳೊಂದಿಗೆ ಮತ್ತಷ್ಟು ಉತ್ತೇಜನ ಪಡೆಯುತ್ತದೆ ಎಂದು ನಾವು ಭಾವಿಸುತ್ತೇವೆ, ”
ಬಾಟಾ ಇಂಡಿಯಾ ಲಿಮಿಟೆಡ್‌ನ ಷೇರುಗಳು ಶುಕ್ರವಾರ ಬಿಎಸ್‌ಇಯಲ್ಲಿ ತಲಾ 1,258.40 ರೂ.ಗೆ ಇಳಿದಿದ್ದು, ಹಿಂದಿನ ಮುಕ್ತಾಯಕ್ಕಿಂತ ಶೇ 0.43 ರಷ್ಟು ಕುಸಿದಿದೆ.
Follow us on Social media