ಮೆಲ್ಬೊರ್ನ್: ಆಸ್ಟ್ರೇಲಿಯಾದ ನಂಬರ್ ಒನ್ ಮಹಿಳಾ ಆಟಗಾರ್ತಿ ಆಸ್ಟ್ರೇಲಿಯಾದ ಆಶ್ಲೇ ಬಾರ್ಟಿ ವರ್ಷದ ಕೊನೆಯ ಗ್ರ್ಯಾನ್ ಸ್ಲಾಮ್ ಯುಎಸ್ ಓಪನ್‌ನಿಂದ ಹಿಂದೆ ಸರಿದ ಬಳಿಕ, ಹಾಲಿ ಪುರುಷ ಚಾಂಪಿಯನ್ ಮತ್ತು ವಿಶ್ವದ ಎರಡನೇ ಶ್ರೇಯಾಂಕಿತ ಸ್ಪೇನ್‌ನ ರಾಫೇಲ್ ನಡಾಲ್ ಸಹ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಯುಎಸ್ ಓಪನ್‌ನಿಂದ ಹಿಂದೆ ಸರಿದಿದ್ದಾರೆ. ಆದರೆ ವಿಶ್ವದ ನಂಬರ್ ಒನ್ ಆಟಗಾರ ಸೆರ್ಬಿಯಾದ ನೊವಾಕ್ ಜೊಕೊವಿಚ್ ಈ ಪಂದ್ಯಾವಳಿಯಲ್ಲಿ ಆಡಲಿದ್ದಾರೆ.
ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ ಸೆರ್ಬಿಯಾದ ನೊವಾಕ್ ಜೊಕೊವಿಚ್ ಈ ಪಂದ್ಯಾವಳಿಯಲ್ಲಿ ಆಡಲಿದ್ದು, ಇದು ಈ ಪಂದ್ಯಾವಳಿಯ ಆಕರ್ಷಣೆಯಾಗಿ ಉಳಿಯಲಿದೆ. ಸಂಘಟಕರು ಮಂಗಳವಾರ ಪುರುಷ ಮತ್ತು ಮಹಿಳಾ ಸಿಂಗಲ್ಸ್ ಆಟಗಾರರ ಪ್ರವೇಶ ಪಟ್ಟಿಯನ್ನು ಬಿಡುಗಡೆ ಮಾಡಿದರು. ಯುಎಸ್ ಓಪನ್ ಆಗಸ್ಟ್ 31 ರಿಂದ ಸೆಪ್ಟೆಂಬರ್ 13 ರವರೆಗೆ ನಡೆಯಲಿದೆ.
ಇನ್ನೊಂದೆಡೆ ಐದು ಬಾರಿ ಯು.ಎಸ್. ಓಪನ್ ಚಾಂಪಿಯನ್ ಆಗಿರುವ ಸ್ವಿಸ್ ಟೆನಿಸ್ ತಾರೆ ರೋಜರ್ ಫೆಡರರ್ ಸಹ ಗೈರುಹಾಜರಾಗಲಿದ್ದು, 38 ವರ್ಷದ ಫೆಡರರ್ ಜೂನ್‌ನಲ್ಲಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ವಿಶ್ವದ ಎರಡನೇ ಶ್ರೇಯಾಂಕಿತ ರಾಫೆಲ್ ನಡಾಲ್ “ಹಲವು ಬಾರಿಯ ಆಲೋಚನೆಗಳ ನಂತರ ನಾನು ಈ ವರ್ಷದ ಯು.ಎಸ್. ಓಪನ್ ಆಡದಿರಲು ನಿರ್ಧರಿಸಿದ್ದೇನೆ” ಎಂದು ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದಾರೆ. “ವಿಶ್ವಾದ್ಯಂತ ಪರಿಸ್ಥಿತಿ ತುಂಬಾ ಜಟಿಲವಾಗಿದೆ, ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿವೆ, ನಮಗೆ ಇನ್ನೂ ಅದರಮೇಲೆ ನಿಯಂತ್ರಣ ಸಿಕ್ಕಿಲ್ಲ. 4 ತಿಂಗಳು ಯಾವುದೇ ಕ್ರೀಡಾಕೂಟಗಳಿಲ್ಲದೆ ಇದ್ದ ನಂತರ ಈ ವರ್ಷಟೆನಿಸ್ ಕ್ಯಾಲೆಂಡರ್ ಖಾಲಿ ಖಾಲಿಯಾಗಿದೆ ಎನ್ನುವುದು ನಾನು ಬಲ್ಲೆ. . ಈ ವರ್ಷ ಮ್ಯಾಡ್ರಿಡ್ ಟೆನಿಸ್ ಟೂರ್ನಿ ಇಲ್ಲವೆಂದು ನಾವು ನೋಡಿದ್ದೇನೆ. ದು ನಾನು ಎಂದಿಗೂ ತೆಗೆದುಕೊಳ್ಳಲು ಬಯಸದ ನಿರ್ಧಾರ ಆದರೆ ಈ ಸಮಯದಲ್ಲಿ ನನ್ನ ಹೃದಯವನ್ನು ಅನುಸರಿಸಲು ನಾನು ನಿರ್ಧರಿಸಿದ್ದೇನೆ ಮತ್ತು ಸದ್ಯಕ್ಕೆ ನಾನು ಪ್ರಯಾಣಕ್ಕೆ ಸಿದ್ದವಾಗಿಲ್ಲ.” ನಡಾಲ್ ಹೇಳಿದ್ದಾರೆ.
ಸೆಪ್ಟೆಂಬರ್ 12-20 ರ ನಡುವೆ ನಡೆಯಲಿದ್ದ ಮ್ಯಾಡ್ರಿಡ್ ಓಪನ್ ಕೋವಿಡ್ ಕಾರಣಕ್ಕೆ ಈ ವರ್ಷ ರದ್ದಾಗಿದೆ.
Follow us on Social media