Breaking News

ಕೋವಿಡ್: ನೀಟ್, ಜೆಇಇ ಪರೀಕ್ಷೆಗಳು ಮುಂದೂಡಿಕೆ

ನವದೆಹಲಿ: ಕೋವಿಡ್  ಪ್ರಕರಣಗಳ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಎಚ್‌ಆರ್‌ಡಿ ಸಚಿವಾಲಯವು ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ(ನೀಟ್ ಮತ್ತು ಜೆಇಇ) ಅನ್ನು ಸೆಪ್ಟೆಂಬರ್‌ಗೆ ಮುಂದೂಡಿದೆ.

“ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸಿಕೊಳ್ಳಲು ನಾವು ಜೆಇಇ ಮತ್ತು ನೀಟ್ ಪರೀಕ್ಷೆಗಳನ್ನು ಮುಂದೂಡಲು ನಿರ್ಧರಿಸಿದ್ದೇವೆ. ಜೆಇಇ-ಮುಖ್ಯ ಪರೀಕ್ಷೆ ಸೆಪ್ಟೆಂಬರ್ 1-6ರ ನಡುವೆ ನಡೆಯಲಿದ್ದು, ಜೆಇಇ-ಅಡ್ವಾನ್ಸ್ ಪರೀಕ್ಷೆ ಸೆಪ್ಟೆಂಬರ್ 27 ರಂದು ನಡೆಯಲಿದೆ. ನೀಟ್ ಪರೀಕ್ಷೆ ಸೆಪ್ಟೆಂಬರ್ 13 ರಂದು ನಡೆಯಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ‘ನಿಹಾಂಕ್’ ಹೇಳಿದರು.

ಈ ಹಿಂದೆ ನೀಟ್ ಪರೀಕ್ಷೆ ಜುಲೈ 26 ಹಾಗೂ ಜೆಇಇ ಪರೀಕ್ಷೆಗಳು ಜುಲೈ 18 ರಿಂದ 23 ರವರೆಗೆ ನಿಗದಿಯಾಗಿದ್ದವು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರವೇಶಕ್ಕಾಗಿ ನಡೆಸಲಾಗುವ ಜೆಇಇ-ಅಡ್ವಾನ್ಸ್ಡ್ ಅನ್ನು ಆಗಸ್ಟ್ 23 ರಂದು ನಿಗದಿಯಾಗಿದ್ದವು. 

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×