ನಿರ್ಮಾಪಕ ಸೂರಪ್ಪಬಾಬು ಜನ್ಮದಿನವಾದ ಇಂದು ನಟ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಪೋಸ್ಟರ್ ಟ್ವಿಟರ್ ಮೂಲಕ ರಿಲೀಸ್ ಆಗಿದೆ.
ಇದೇನಪ್ಪ ಫ್ಯಾಂಟಮ್’ ಸುದ್ದಿಯಲ್ಲಿದೆ, ಆದರೆ ‘ಕೋಟಿಗೊಬ್ಬ 3’ ಚಿತ್ರದ ಸುಳಿವೇ ಇಲ್ಲವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಕಿಚ್ಚನ ಅಭಿಮಾನಿಗಳಿಗೆ ಇದು ನಿಜಕ್ಕೂ ಅಚ್ಚರಿಯಾಗಿದ್ದು, ಹೊಸ ಪೋಸ್ಟರ್ ಬಿಡುಗಡೆಯಿಂದ ಸಖತ್ ಖುಷಿಯಾಗಿದ್ದಾರೆ.
ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಜನ್ಮದಿನದಂದು ಅವರಿಗೆ ಶುಭಾಶಯ ಕೋರುವ ಮೂಲಕ ಸುದೀಪ್ ಅಭಿಮಾನಿಗಳಿಗೆ ಹೊಸ ಉಡುಗೊರೆ ನೀಡಲಾಗಿದೆ. ‘ಕೋಟಿಗೊಬ್ಬ 3’ ಚಿತ್ರದ ಇದುವರೆಗಿನ ಪೋಸ್ಟರ್ಗಳು, ಬಿಡುಗಡೆಯಾದ ಹಾಡು ಸುದೀಪ್ ಅವರ ಖದರ್ ಲುಕ್ಅನ್ನು ಬಿಂಬಿಸಿದ್ದವು. ಈ ಹೊಸ ಪೋಸ್ಟರ್ ಕೂಡ ಅದೇ ಬಗೆಯ ಖದರ್ ತೋರಿಸಿದೆ.
ವಿಲನ್ನ ತಲೆಯನ್ನು ಎಡಗೈನಲ್ಲಿ ನೆಲಕ್ಕೆ ಒತ್ತಿ ಹಿಡಿದ ಸುದೀಪ್ ಅವರ ಒಂದು ಬದಿಯ ಪೋಸ್ ಕಂಡು ಫ್ಯಾನ್ಸ್ ಪುಳಕಿತರಾಗಿದ್ದಾರೆ. ಚಿತ್ರದ ಆಕ್ಷನ್ ಸನ್ನಿವೇಶವೊಂದರ ಪೋಸ್ಟರ್ ಇದು. ಈ ಪೋಸ್ಟರ್ ನೋಡಿದ ಅಭಿಮಾನಿಗಳು ಕಟ್ಟಡವೊಂದರ ಒಳಗೆ ನಡೆಯುವ ಮೈನವಿರೇಳಿಸುವ ಹೊಡೆದಾಟದ ದೃಶ್ಯವನ್ನು ಕಲ್ಪಿಸಿಕೊಂಡು ರೋಮಾಂಚಿತರಾಗುತ್ತಿದ್ದಾರೆ.
ಸೂರಪ್ಪ ಬಾಬು ಅವರಿಗೆ ಜನ್ಮದಿನದ ಶುಭಾಶಯ ಕೋರಿರುವ ಸುದೀಪ್, ಸಂತೋಷ ಮತ್ತು ಆರೋಗ್ಯ ಸದಾ ಇರಲಿ ಎಂದು ಹಾರೈಸಿದ್ದಾರೆ. ‘ಕೋಟಿಗೊಬ್ಬ 3’ ಚಿತ್ರತಂಡ ಹಾಗೂ ಸುದೀಪ್ ಅಭಿಮಾನಿಗಳು ಸಹ ಸೂರಪ್ಪ ಬಾಬು ಅವರಿಗೆ ಶುಭಾಶಯ ತಿಳಿಸಿದ್ದಾರೆ.
Follow us on Social media