ಮುಂಬೈ: ಈಗ ಮಹಾಮಾರಿ ಕೊರೋನಾ ವೈರಸ್ ನಿಂದ ರಕ್ಷಿಸಿಕೊಳ್ಳುವುದಕ್ಕಾಗಿ ಸಾರ್ವಜನಿಕವಾಗಿ ಮಾಸ್ಕ್ ಧರಿಸುವುದು ಸಾಮಾನ್ಯ. ಆದರೆ ಪುಣೆಯ ವ್ಯಕ್ತಿಯೊಬ್ಬರು ಸುಮಾರು ಮೂರು ಲಕ್ಷ ರೂಪಾಯಿ ಬೆಲೆ ಬಾಳುವ ಮಾಸ್ಕ್ ತಯಾರಿಸಿ, ಅದನ್ನು ಧರಿಸುವ ಮೂಲಕ ಸುದ್ದಿಯಾಗಿದ್ದಾರೆ.
ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್ವಾಡ್ ನಿವಾಸಿ ಶಂಕರ್ ಕುರಡೆ ಎಂಬವರು 2.89 ಲಕ್ಷ ರೂಪಾಯಿ ಮೌಲ್ಯದ ಮಾಸ್ಕ್ ತಯಾರಿಸಿ ಧರಿಸಿದ್ದು, ಅವರ ಚಿನ್ನದ ಮಾಸ್ಕ್ ಧರಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಬಗ್ಗೆ ಮಾತನಾಡಿರುವ ಶಂಕರ್, ಈ ಮಾಸ್ಕ್ ತೆಳುವಾಗಿದ್ದು, ಗಾಳಿ ಒಳಕ್ಕೆ ಹಾಗೂ ಹೊರ ಹೋಗಲೆಂದೇ ಸಣ್ಣ ಸಣ್ಣ ರಂಧ್ರಗಳನ್ನು ಮಾಡಲಾಗಿದೆ. ಹೀಗಾಗಿ ಉಸಿರಾಡಲು ಯಾವುದೇ ತೊಂದರೆಯಾಗಲ್ಲ. ಆದರೆ ಈ ಮಾಸ್ಕ್ ಎಷ್ಟು ಪರಿಣಾಮ ಬೀರುತ್ತದೆ ಎಂಬ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ಶಂಕರ್ ಕುರಡೆ ಅವರು ಚಿನ್ನದ ಆಭರಣಗಳನ್ನು ಧರಿಸುವುದನ್ನು ಇಷ್ಟಪಡುತ್ತಾರೆ. ಹೀಗಾಗಿ ಅವನ ಕೈ ಮತ್ತು ಕುತ್ತಿಗೆಯಲ್ಲಿ ದಪ್ಪ ಚಿನ್ನದ ಸರ ಇದೆ.
Follow us on Social media