Breaking News

ಕೊರೋನಾ ವೈರಸ್: ದೇಶಾದ್ಯಂತ ಲಾಕ್ ಡೌನ್ ಹಿನ್ನಲೆ, ರಾಷ್ಟ್ರೀಯ ಹೆದ್ದಾರಿ ಟೋಲ್‌ ಸಂಗ್ರಹ ತಾತ್ಕಾಲಿಕ ರದ್ದುಗೊಳಿಸಿದ ಕೇಂದ್ರ ಸರ್ಕಾರ

ನವದೆಹಲಿ: ಕೊರೋನಾ ವೈರಸ್ ಪ್ರಸರಣ ತಪ್ಪಿಸುವ ಉದ್ದೇಶದಿಂದ ದೇಶಾದ್ಯಂತ ಹೇರಲಾಗಿರುವ ಲಾಕ್ ಡೌನ್ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಟೋಲ್‌ ಸಂಗ್ರಹ ರದ್ದು ಮಾಡಿದೆ.

ಈ ಕುರಿತಂತೆ ಸ್ವತಃ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಟ್ವೀಟ್ ಮಾಡಿದ್ದು, ದೇಶದ ಎಲ್ಲಾ ಟೋಲ್‌ ಪ್ಲಾಜಾಗಳಲ್ಲಿ ಶುಲ್ಕ ಸಂಗ್ರಹಣೆಯನ್ನು ಬುಧವಾರ ರಾತ್ರಿಯಿಂದಲೇ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ರದ್ದು ಮಾಡಿದೆ ಎಂದು ಹೇಳಿದ್ದಾರೆ.

‘ಕೊರೋನಾ ವೈರಸ್‌ ಭೀತಿ ಇರುವ ಈ ಸಂದರ್ಭದಲ್ಲಿ ಅಗತ್ಯ ಸೇವೆಗಳು ತುರ್ತಾಗಿ ಲಭ್ಯವಾಗಬೇಕೆಂಬ ಉದ್ದೇಶಕ್ಕೆ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಕೋವಿಡ್‌ 19 ಹಿನ್ನೆಲೆಯಲ್ಲಿ ದೇಶದ ಟೋಲ್‌ ಪ್ಲಾಜಾಗಳಲ್ಲಿ ಟೋಲ್‌ ಸಂಗ್ರಹವನ್ನು ತಾತ್ಕಾಲಿಕವಾಗಿ ಸರ್ಕಾರ  ನಿರ್ಬಂಧಿಸಿದೆ, ತುರ್ತು ಸೇವೆಗಳಿಗಿರುವ ತೊಡಕು ನಿವಾರಿಸಲಷ್ಟೇ ಈ ನಿರ್ಧಾರ ಕೈಗೊಂಡಿಲ್ಲ. ಬದಲಿಗೆ ಸಮಯ ಉಳಿಸುವ ಸಲುವಾಗಿಯೂ ಈ ತೀರ್ಮಾನ ಮಾಡಲಾಗಿದೆ ಎಂದು ಗಡ್ಕರಿ ಹೇಳಿದ್ದಾರೆ.

ಅಂತೆಯೇ ರಸ್ತೆಗಳ ನಿರ್ವಹಣೆ ಮತ್ತು ಹೆದ್ದಾರಿ ತುರ್ತು ಸೇವೆಗಳು ಎಂದಿನಂತೇ ಲಭ್ಯವಾಗಲಿವೆ ಎಂದೂ ಗಡ್ಕರಿ ಅವರು ಸ್ಪಷ್ಟಪಡಿಸಿದ್ದಾರೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×