ನವದೆಹಲಿ: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಇಂಗ್ಲೆಂಡ್ ಪ್ರವಾಸ ರದ್ದಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಬಿಬಿಸಿ ವರದಿ ಮಾಡಿದ್ದು, ಜೂನ್ ತಿಂಗಳಲ್ಲಿ ಭಾರತ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ತ್ರಿಕೋನ ಏಕದಿನ ಸರಣಿ ಹಾಗೂ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಟಿ20 ಸರಣಿ ಆಯೋಜನೆಯಾಗಿತ್ತು. ಆದರೆ ಕೊರೋನಾ ವೈರಸ್ ನಿಂದಾಗಿ ಈ ಟೂರ್ನಿ ಆಯೋಜನೆಯನ್ನು ಮುಂದೂಡಲಾಗಿತ್ತು.
ಆದರೆ ಪ್ರಸ್ತುತ ಭಾರತದಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಮತ್ತು ಆಟಗಾರ್ತಿಯರು ಅಭ್ಯಾಸಕ್ಕಾಗಿ ಒಂದೆಡೆ ಸೇರುವುದು ಸುಲಭವಲ್ಲ ಎಂಬ ಕಾರಣಕ್ಕಾಗಿ ಟೂರ್ನಿಯಿಂದ ಭಾರತ ಹೊರಬಂದಿದೆ.
ಆಸ್ಚ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ನಲ್ಲಿ ಕೊನೆಯ ಬಾರಿಗೆ ಭಾರತ ತಂಡದ ವನಿತೆಯರು ಕೊನೆಯದಾಗಿ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು. ಬಳಿಕ ಮಾರ್ಚ್ ತಿಂಗಳಿನಲ್ಲಿ ಹೇರಲಾದ ಲಾಕ್ಡೌನ್ ಬಳಿಕ ಯಾವುದೇ ರೀತಿಯ ಪಂದ್ಯ ಅಥವಾ ಅಭ್ಯಾಸದಲ್ಲಿ ಆಟಗಾರ್ತಿಯರು ಪಾಲ್ಗೊಂಡಿಲ್ಲ.
Follow us on Social media