ಬೆಂಗಳೂರು : ಕೊರೋನಾ ವೈರಸ್ ಕುರಿತು ಜನರಲ್ಲಿ ಎಲ್ಲೆಡೆ ಆತಂಕ ಮನೆ ಮಾಡಿದೆ.
ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿದೆ. ಆದರೆ ಶಾಲೆಗಳಿಂದ ಪೋಷಕರಿಗೆ ಮಾಹಿತಿ ತಲುಪುವುದು ವಿಳಂಬವಾದ ಕಾರಣ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕರೆದೊಯ್ದು ಪುನಃ ಮನೆಗೆ ಹಿಂತಿರುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬಂದಿತು.
ಶಾಲೆಗಳಿಗೆ ದಿಢೀರನೆ ರಜೆ ಘೋಷಿಸಿರುವುದು ನಾಗರಿಕರಲ್ಲಿ ಆತಂಕಕ್ಕೆ ಎಡೆ ಮಾಡಿದೆ. ಕೇವಲ ಬೆಂಗಳೂರಿನ ಸುತ್ತಮತ್ತಲಿನ ಶಾಲೆಗಳಿಗೆ ಮಾತ್ರ ರಜೆ ಘೋಷಿಸಿದ್ದರೂ ಇತರ ಜಿಲ್ಲೆಗಳ ಶಾಲೆಗಳಿಗೂ ರಜೆ ಎಂಬ ಸುಳ್ಳು ಸುದ್ದಿ ಹಬ್ಬಿದ್ದು ಯಾವುದು ಸುಳ್ಳು ಯಾವುದು ನಿಜ ಎಂಬ ಕಸಿವಿಸಿಯಲ್ಲಿ ಪೋಷಕರಿದ್ದರು.