ಬೆಂಗಳೂರು: ಜೂನ್.1ರಿಂದ ಹೈಕೋರ್ಟ್ ಕಲಾಪಗಳು ಎಂದಿನಂತೆ ಆರಂಭಗೊಳ್ಳಲಿದ್ದು, ಕೊರೋನಾ ವೈರಸ್ ಪರಿಣಾಮ ಕಲಾಪದ ವೇಳೆ ಕಟ್ಟುನಿಟ್ಟಿನ ಆದೇಶ ಪಾಲನೆ ಮಾಡಬೇಕೆಂದು ರಾಜ್ಯ ಸರ್ಕಾರ ಆದೇಶಿಸಿದೆ.
ಹೈಕೋರ್ಟ್ ಕಲಾಪ ಆರಂಭ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಕೆಲ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಕಲಾಪದ ವೇಳೆ ನ್ಯಾಯಮೂರ್ತಿಗಳು, ವಕೀಲರು ಕಡ್ಡಾಯವಾಗಿ ಮಾಸ್ಕ್’ಗಳನ್ನು ಬಳಕೆ ಮಾಡಬೇಕೆಂದು ತಿಳಿಸಲಾಗಿದೆ. ಅಲ್ಲದೆ. ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್ ಬಳಕೆ, ಎಸಿ ಬದಲು ಫ್ಯಾನ್ ಳಕೆ ಮಾಡಬೇಕೆಂದು ತಿಳಿಸಿದೆ.
ಇನ್ನು ವಕೀಲರು 15-20 ನಿಮಿಷದಲ್ಲಿ ವಾದ ಮಂಡನೆ ಮುಗಿಸಬೇಕು, ಕೋರ್ಟ್ ಹಾಲ್’ನಲ್ಲಿ ಒಂದು ಬಾರಿ 20 ವಕೀಲರಿಗೂ ಹೆಚ್ಚು ಇರಬಾರದು. ಹೈಕೋರ್ಟ್ ಕಚೇರಿಗೆ ಯಾರು ಕೂಡ ಪ್ರವೇಶ ಮಾಡಬಾರದು. ವಕೀಲರು, ಕ್ಲರ್ಕ್, ಕಕ್ಷಿದಾರರಿಗೆ ಕಚೇರಗೆ ಪ್ರವೇಶವಿಲ್ಲ. ಎಲ್ಲರೂ ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್ ಬಳಕೆ ಮಾಡಬೇಕು. ಜೂನ್.1ರಿಂದ ಈ ಎಲ್ಲಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲೇಬೇಕೆಂದು ಸರ್ಕಾರ ತಿಳಿಸಿದೆ.
Follow us on Social media