ಮಡಿಕೇರಿ: ಕಳೆದ ಶುಕ್ರವಾರ ಗುಡೇ ಫ್ರೈಡೆಯಂದು ರಾತ್ರಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಏಳು ಮಂದಿ ಸಾವಿಗೆ ಕಾರಣನಾಗಿದ್ದ ಆರೋಪಿಯ ಮೃತದೇಹ ಇಂದು ಪತ್ತೆಯಾಗಿದೆ.
ಆರೋಪಿ 55 ವರ್ಷದ ಬೋಜ ಮೃತದೇಹ ಮುಗುಟಗೇರಿಯ ಆತನ ಮನೆಯ ಸಮೀಪದ ಕಾಫಿ ತೋಟದಲ್ಲಿ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬೋಜನ ಪತ್ತೆಯಾಗಿ ಶೋಧ ಕಾರ್ಯ ನಡೆಸಿದ್ದರು. ಆದರೆ ಇಂದು ಆತನ ಮೃತದೇಹ ಪತ್ತೆಯಾಗಿದೆ.
ಮನೆಯಲ್ಲಿ ಮಲಗಿದ್ದಾಗ ಬೆಂಕಿ ಹಚ್ಚಿದ್ದರಿಂದ ಯಾರೂ ಉಳಿಯಲು ಸಾಧ್ಯವಾಗಿಲ್ಲ. ನಾಲ್ಕು ಪುಟ್ಟ ಮಕ್ಕಳು ಸೇರಿದಂತೆ ಒಟ್ಟಾರೆ ಏಳು ಮಂದಿ ಈ ಅವಘಡದಲ್ಲಿ ಮೃತಪಟ್ಟಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡು ಜೀನ್ಮರಣ ಹೋರಾಟ ನಡೆಸುತ್ತಿದ್ದ 28 ವರ್ಷದ ಭಾಗ್ಯ ಇಂದು ಮುಂಜಾನೆ ಮೃತಪಟ್ಟಿದ್ದಾರೆ.
ಮನೆಗೆ ಬೆಂಕಿ ಇಟ್ಟ ನಂತರ ಬೋಜ ತನ್ನ ಇನ್ನೊಬ್ಬ ಮಗಳಿಗೆ ಕರೆ ಮಾಡಿ ಮನೆಗೆ ಬೆಂಕಿ ಹಾಕಿರುವುದಾಗಿ ಹೇಳಿದ್ದನು. ಈ ಹಿನ್ನೆಲೆಯಲ್ಲಿ ಪೊಲೀಸರು ಬೋಜನ್ನು ಹುಡುಕುತ್ತಿದ್ದರು.
Follow us on Social media