ಬೆಂಗಳೂರು: ಕೇಂದ್ರ ಸಚಿವ ಡಿವಿ ಸದಾನಂದಗೌಡ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಕೊರೋನಾ ಮಹಾಮಾರಿ ವಕ್ಕರಿಸಿರುವ ಬಗ್ಗೆ ಸದಾನಂದಗೌಡ ಅವರು ಟ್ವೀಟರ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಕೋವಿಡ್ ನ ಆರಂಭಿಕ ರೋಗಲಕ್ಷಣಗಳ ಕಾಣಿಸಿಕೊಂಡಿದ್ದು ಕೂಡಲೇ ನಾನು ಪರೀಕ್ಷಿಸಿಕೊಂಡೆ, ವರದಿ ಪಾಸಿಟಿವ್ ಬಂದಿದೆ. ಸದ್ಯ ನಾನು ಕ್ವಾರಂಟೈನ್ ನಲ್ಲಿದ್ದು, ನನ್ನ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರೂ ಜಾಗರೂಕರಾಗಿರಿ ಮತ್ತು ತಮ್ಮನ್ನು ಪರೀಕ್ಷಿಸಿಕೊಳ್ಳಿ ಎಂದು ವಿನಂತಿಸುತ್ತೇನೆ, ಸುರಕ್ಷಿತವಾಗಿರಿ, ಎಂದು ಟ್ವೀಟಿಸಿದ್ದಾರೆ.
