Breaking News

ಕೆಜಿಎಫ್-2 ಸಿನಿಮಾ ಪಾತ್ರಗಳಲ್ಲಿ ಬದಲಾವಣೆ: ಅನಂತ್ ನಾಗ್ ಪಾತ್ರಕ್ಕೆ ಪ್ರಕಾಶ್ ರಾಜ್

ಕೆಜಿಎಫ್​ ಚಾಪ್ಟರ್ 2 ತಂಡ ಚಿತ್ರೀಕರಣಕ್ಕೆ ಚಾಲನೆ ನೀಡಿದೆ. ಇದೀಗ ಮೊದಲ ದಿನದ ಶೂಟಿಂಗ್​ನ ಫೋಟೋವೊಂದು ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಈ ಹಿಂದೆ ಆನಂದ್​ ಇಂಗಳಗಿ ಪಾತ್ರದಲ್ಲಿ ಅನಂತ್​ ನಾಗ್​ ಕಾಣಿಸಿಕೊಂಡಿದ್ದರು. ರಾಕಿ ಭಾಯಿ ಕಥೆಯನ್ನು ನಿರೂಪಣೆ ಮಾಡಿದ್ದರು. ಜತೆಗೆ ಇತ್ತೀಚಿನ ದಿನಗಳಲ್ಲಿ ಕಾರಣಾಂತರಗಳಿಂದ ಅನಂತ್​ನಾಗ್​ ಕೆಜಿಎಫ್​ ಸಿನಿಮಾದಿಂದ ಹೊರ ನಡೆದಿದ್ದರು ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಬಳಿಕ ಅವರ ಪಾತ್ರ ಯಾರು ಮಾಡಲಿದ್ದಾರೆ ಎಂಬ ಬಗ್ಗೆಯೂ ಚರ್ಚೆ ನಡೆದಿತ್ತು. ಇದೀಗ ಅದೆಲ್ಲದಕ್ಕೂ ಫೋಟೋ ಸಮೇತ ಉತ್ತರ ಸಿಕ್ಕಿದೆ.

ಮೊದಲ ಭಾಗದಲ್ಲಿ ಅನಂತ್​ ನಾಗ್​ ಮಾಡಿದ್ದ ಪಾತ್ರವನ್ನು ಚಾಪ್ಟರ್ 2ರಲ್ಲಿ ಪ್ರಕಾಶ್​ ರೈ ಮಾಡಲಿದ್ದಾರೆ. ಈಗಾಗಲೇ ಮಿನರ್ವ ಮಿಲ್​ನಲ್ಲಿ ಶೂಟಿಂಗ್​ ಸಹ ಶುರುವಾಗಿದ್ದು, ರೈ ಮತ್ತು ಮಾಳವಿಕಾ ಅವಿನಾಶ್ ಸಹ ಪಾಲ್ಗೊಂಡಿದ್ದಾರೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×