ಫಿನ್ ಲ್ಯಾಂಡ್ : ಫಿನ್‌ಲ್ಯಾಂಡ್‌ನಲ್ಲಿ ಶನಿವಾರ ನಡೆದ ಕುರ್ಟೇನ್ ಗೇಮ್ಸ್‌ನಲ್ಲಿ ಒಲಿಂಪಿಕ್ ಪದಕವೀರ ಜಾವೆಲಿನ್ ಪಟು ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದಾರೆ. 86.69 ಮೀಟರ್ ಜಾವೆಲಿನ್ ಎಸೆಯುವ ಮೂಲಕ ಮೊದಲ ಪ್ರಯತ್ನದಲ್ಲೇ ಚಿನ್ನಕ್ಕೆ ಮುತ್ತಿಕ್ಕಿದರು.
ಟ್ರಿನಿಡಾಡ್ ಮತ್ತು ಟೊಬಾಗೋದ ಕೆಶೋರ್ನ್ ವಾಲ್ಕಾಟ್ ಮತ್ತು ಗ್ರೆನಡಾದ ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್‍ಸ್ ಅವರರನ್ನು ನೀರಜ್ ಚೋಪ್ರಾ ಸೋಲಿಸಿದರು. ವಾಲ್ಕಾಟ್ 86.64 ಮೀ ಎಸೆದು ಎರಡನೇ ಸ್ಥಾನಕ್ಕೆತೃಪ್ತಿ ಪಟ್ಟುಕೊಂಡರೆ, ಪೀಟರ್‍ಸ್ 84.75 ಮೀ. ದೂರ ಎಸೆದು ತೃತೀಯ ಸ್ಥಾನಿಯಾಗಿ ಹೊರ ಹೊಮ್ಮಿದರು.ನೀರಜ್ ಚೋಪ್ರಾ ಮೊದಲ ಎಸೆತದಲ್ಲೇ ಜಯಶಾಲಿಯಾದರು. ನಂತರದ ಎರಡೂ ಎಸೆತಗಳಲ್ಲಿಯೂ ಫೌಲ್ ಆದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯಿವರಾಗಿದ್ದು, ಆ ಬಳಿಕ ಇದು ಅವರ ಎರಡನೇ ಸ್ಪರ್ಧೆಯಾಗಿದೆ.
Follow us on Social media