ತುಮಕೂರು : ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಬಳಿಕ ಆ ಕಾರಿಗೆ ಎದುರಿನಿಂದ ವೇಗವಾಗಿ ಬಂದ ಮತ್ತೊಂದು ಕಾರು ಡಿಕ್ಕಿಯಾದ ಪರಿಣಾಮ ಎರಡೂ ಕಾರುಗಳಲ್ಲಿದ್ದ 13 ಮಂದಿ ಸಾವನ್ನಪ್ಪಿರುವ ಭೀಕರ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಯಡಿಯೂರು ಹೋಬಳಿಯ ಬ್ಯಾಲದಕೆರೆ ಸಮೀಪ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಸಂಭವಿಸಿದೆ.
ತಮಿಳುನಾಡು ಮೂಲದ ಚಾವರ್ಲೆಟ್ ಟವೇರಾ ಕಾರಿನ ಪ್ರಯಾಣಿಕರು ಧರ್ಮಸ್ಥಳಕ್ಕೆ ಹಿಂದಿರುಗಿ ವಾಪಾಸ್ ಬರುತ್ತಿದ್ದಾಗ ಅವರ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಈ ಕಾರಿಗೆ ಡಿಕ್ಕಿ ಹೊಡೆದ ಬ್ರೀಜಾ ಕಾರಿನಲ್ಲಿ ಬೆಂಗಳೂರಿನ ದೊಡ್ಡ ಆಲದಮರ ಮೂಲದ ನಾಲ್ವರು ಯುವಕರಿದ್ದರು ಎಂದು ತಿಳಿದು ಬಂದಿದೆ.
ತಮಿಳುನಾಡಿನ ಸೀಕನಪಲ್ಲಿ ನಿವಾಸಿಗಳಾದ ಸೌಂದರ್ ರಾಜ್, ತ್ರಿಶನ್ಯ, ಮಂಜುನಾಥ್, ತನುಜಾ, ಚೇತನ್, ಗೌರಮ್ಮ, ರತ್ನಮ್ಮ, ಸರಳ, ಚಾವರ್ಲೆಟ್ ಕಾರು ಚಾಲಕ ರಾಜೇಂದ್ರ, ಬ್ರಿಜ್ಜಾ ಕಾರು ಚಾಲಕ ಬೆಂಗಳೂರಿನ ಹುಣಸೇಮಾರನಹಳ್ಳಿ ನಿವಾಸಿ ಲಕ್ಷ್ಮೀ ಕಾಂತ್, ಗೇರುಪಾಳ್ಯ ನಿವಾಸಿ ಸಂದೀಪ್, ರಾಮೋಹಳ್ಳಿ ನಿವಾಸಿ ಮಧು ಮೃತಪಟ್ಟವರು.
Source : UNI
Follow us on Social media