ಕುಂದಾಪುರ: ಬೈಂದೂರು ತಾಲ್ಲೂಕಿನ ಕೊಡೇರಿ ಬಳಿ ಸಮುದ್ರದ ಮಧ್ಯದಲ್ಲಿ ಮೀನುಗಾರಿಕಾ ದೋಣಿ ಮುಳುಗಿ ನಾಲ್ವರು ಮೀನುಗಾರರು ಮೃತಪಟ್ಟಿದ್ದಾರೆ. ಈ ದುರಂತ ಭಾನುವಾರ ಅಪರಾಹ್ನ 3.30ರ ಸುಮಾರಿಗೆ ನಡೆದಿದೆ.
ಒಂಬತ್ತು ಮೀನುಗಾರರಿದ್ದ ‘ಸಾಗರಾಶ್ರಿ’ ಎಂಬ ದೋಣಿ ಸಮುದ್ರ ತೀರದಿಂದ ಭಾನುವಾರ ಬೆಳಿಗ್ಗೆ 10 ಗಂಟೆಗೆ ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿದಿತ್ತು. ಆದರೆ ಸಮುದ್ರದಲ್ಲಿ ಎತ್ತರದ ಅಲೆಗಳು ಮತ್ತು ಅನಿರೀಕ್ಷಿತ ಹವಾಮಾನ ವೈಪರೀತ್ಯಗಳಿಂದಾಗಿ ದೋಣಿ ಸಮುದ್ರದ ಮಧ್ಯೆ ಮಗುಚಿದೆ.ಪರಿಣಾಮ ನಾಲ್ವರು ನಾಲ್ವರು ಮೀನುಗಾರರು ಮೃತಪಟ್ಟಿದ್ದಾರೆ.
ನಾಲ್ಕು ಮಂದಿ ಮೀನುಗಾರರು ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯ ಮುಂದುವರೆದಿದೆ.
Follow us on Social media