ಮೂಲ್ಕಿ : ಮೂಲ್ಕಿ ಪೋಲಿಸ್ ಠಾಣೆ ವ್ಯಾಪ್ತಿಯಾ ಕಿನ್ನಿಗೋಳಿ ಸಮೀಪದ ಶಾಲೆಗಳಲ್ಲಿ ಕಳ್ಳತನ ನಡೆದ ಘಟನೆ ವರದಿಯಾಗಿದೆ.
ಕಿನ್ನಿಗೋಳಿ ಸೈಂಟ್ ಮೇರೀಸ್ ಶಾಲೆಯ ಹೊರಗಿನ ಕಬ್ಬಿಣದ ಬಾಗಿಲು ಹಾಗೂ ಪ್ರಾಂಶುಪಾಲರ ಕಚೇರಿಯ ಬೀಗವನ್ನು ಭಾರವಾದ ಸಾಧನದಿಂದ ತುಂಡುರಿಸಿ ಕಳ್ಳರು ಒಳ ನುಗ್ಗಿ ಸಂಪೂರ್ಣ ಶಾಲೆಯ ಒಳಾಂಗಣ ಜಾಲಾಡಿಸಿದ್ದಾರೆ.
ಶಾಲೆಯ ಕಚೇರಿಗೆ ನುಗ್ಗಿ ಏಳು ಕಪಾಟುಗಳನ್ನು ಹಾಗೂ ಡ್ರಾವರ್ ಗಳನ್ನು ಜಾಲಾಡಿ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಕೊನೆಗೆ ಏನೂ ಸಿಗದೆ ಇನ್ನೊಂದು ರೂಮಿಗೆ ಹೋದ ಕಳ್ಳರು ಪ್ರಿಜ್ಜ್ ನಲ್ಲಿಟ್ಟಿದ್ದ ಸಿಹಿತಿಂಡಿ ಹಾಗೂ ಚಾಕ್ ಲೇಟ್ ಗಳನ್ನು ತಿಂದು ಶಾಲೆಯ ಒಳಗೆ ಬಿಸಾಡಿದ್ದಾರೆ ಎನ್ನಲಾಗಿದೆ.
ಶಿಕ್ಷಕರ ಕೊಠಡಿಯ ಭೀಗ ಮುರಿದು ವಾಚನ್ನು ಕಳವು ಮಾಡಲಾಗಿದೆ.ಶಾಲೆಯ ಮೇಲ್ಭಾದಿಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರವನ್ನು ಧ್ವಂಸಗೊಳಿಸಿದ್ದಾರೆ.
ಶಾಲೆಯ ಸಿಸಿ ಕ್ಯಾಮರದಲ್ಲಿ ಕಳ್ಳರು ಮುಖಕ್ಕೆ ಮಾಸ್ಕ್ ಧರಿಸಿ ಕಳ್ಳತನ ಮಾಡುತ್ತಿರುವುದು ಕಂಡು ಬಂದಿದ್ದು ಮೂಲ್ಕಿ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.