ಕಾಸರಗೋಡು : ಕೊರೊನಾದಿಂದ ಉಂಟಾಗಿದ್ದ ಲಾಕ್ ಡೌನ್ ಹಿನ್ನಲೆಯಲ್ಲಿ ಮುಂದೂಡಲ್ಪಟ್ಟಿದ್ದ ಎಸ್ ಎಸ್ ಎಲ್ ಸಿ ಹಾಗೂ ಹಯರ್ ಸೆಕಂಡರಿ ಪರೀಕ್ಷೆ ಮೇ 21 ರಿಂದ 29 ರ ನಡುವೆ ನಡೆಸಲು ಕೇರಳ ಸರಕಾರ ತೀರ್ಮಾನಿಸಲಾಗಿದೆ.
ಇನ್ನು ಲಾಕ್ ಡೌನ್ ಆರಂಭವಾಗುವ ಮೊದಲು ಪೂರ್ಣಗೊಂಡ ಪರೀಕ್ಷೆಯ ಮೌಲ್ಯ ಮಾಪನ ಮೇ 13ರಿಂದ ಆರಂಭಗೊಳ್ಳಲಿದೆ. ಶಾಲೆಗಳು ವಿಳಂಬವಾಗಿ ಆರಂಭವಾಗುತ್ತಿದ್ದರೂ ಅಧ್ಯಯನ ಜೂನ್ ಒಂದರಿಂದ ಆರಂಭಗೊಳ್ಳಲಿದೆ.
ವಿಕ್ಟರ್ಸ್ ಚಾನೆಲ್ ಮೂಲಕ ವಿದ್ಯಾರ್ಥಿಗಳಿಗೆ ತರಗತಿ ನಡೆಸುವ ಕುರಿತು ಈಗಾಗಲೇ ತೀರ್ಮಾನ ತೆಗೆದುಕೊಳ್ಳಲಿದೆ. ಜೂನ್ ಒಂದರ ಮೊದಲು ಪಠ್ಯ ಪುಸ್ತಕ ವಿದ್ಯಾರ್ಥಿಗಳಿಗೆ ತಲಪಿಸುವ ಕುರಿತು ಚಿಂತನೆ ನಡೆಯುತ್ತಿದೆ. ಇನ್ನು ಈ ನಡುವೆ ವಿದ್ಯಾರ್ಥಿಗಳ ಅಧ್ಯಯನ ಮೊಟಕುಗೊಳ್ಳದಂತೆ ಎಲ್ಲಾ ರೀತಿಯ ಕ್ರಮ ತೆಗೆದುಕೊಂಡಿರುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
Follow us on Social media