ಕಾಸರಗೋಡು: ನದಿಯಲ್ಲಿ ಮುಳುಗಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಆದಿತ್ಯವಾರ ಸಂಜೆ ಕಾಞ೦ಗಾಡ್ ಆರಾಯಿ ಹೊಳೆಯಲ್ಲಿ ನಡೆದಿದೆ. ಮೃತಪಟ್ಟವನನ್ನು ನೀಲಂಕರದ ರಿತಿನ್ ರಾಜು ( 17) ಎಂದು ಗುರುತಿಸಲಾಗಿದೆ.
ಎರಡನೇ ಪಿ ಯು ಸಿ ವಿದ್ಯಾರ್ಥಿಯಾಗಿದ್ದನು . ಆದಿತ್ಯವಾರ ಸಂಜೆ ಸ್ನಾನಕ್ಕಿಳಿದ ಸಂದರ್ಭದಲ್ಲಿ ಘಟನೆ ನಡೆದಿದೆ. ಜೊತೆಗಿದ್ದವರು ರಕ್ಷಿಸಲು ಯತ್ನಿಸಿದರೂ ಮೇಲಕ್ಕೆತ್ತಲಾಗಲಿಲ್ಲ .
ಕೊನೆಗೂ ಅಗ್ನಿಶಾಮಕ ದಳದ ಸಿಬಂದಿಗಳು ಸ್ಥಳೀಯರು ಶೋಧ ನಡೆಸಿ ಮೇಲಕ್ಕೆತ್ತಿದರೂ ಆಗಲೇ ಮೃತಪಟ್ಟಿದ್ದರು . ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ.
Follow us on Social media