ಕಾಸರಗೋಡು : ಪೊಲೀಸರಿಂದ ತಪ್ಪಿಸಿ ಪರಾರಿಯಾಗಿರುವ ಕೊಲೆ ಪ್ರಕರಣದ ಆರೋಪಿಯ ಪತ್ತೆಗೆ ಕಾಸರಗೋಡು ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸಿದ್ದಾರೆ.
ಸುಳ್ಯ ಅಜ್ಜಾವರ ದ ಅಬ್ದುಲ್ ಅಜೀಜ್ (32) ತಲೆ ಮರೆಸಿಕೊಂಡಿರುವ ಆರೋಪಿ. ಬೇಕಲ ಠಾಣಾ ವ್ಯಾಪ್ತಿಯ ಆಯಂಬಾರದಲ್ಲಿ ನಡೆದ ಸುಬೈದಾ ಎಂಬ ಮಹಿಳೆಯ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಕೊಲೆಗೈದ ಬಳಿಕ ಚಿನ್ನಾಭರಣವನ್ನು ದೋಚಿದ್ದನು. ಈತನನ್ನು ಬಂಧಿಸಿ ಸುಳ್ಯದ ನ್ಯಾಯಾಲಯಕ್ಕೆ ಹಾಜರು ಪಡಿಸಿ ಮರಳಿ ಕಾಸರಗೋಡಿಗೆ ಕರೆ ತರುತ್ತಿದ್ದಾಗ ಸುಳ್ಯ ಪೇಟೆ ಯಲ್ಲಿ ಪೊಲೀಸರಿಂದ ತಪ್ಪಿಸಿ ಪರಾರಿಯಾದ ಈತ ನನ್ನು ಮತ್ತೆ ಬಂಧಿಸಲು ಸಾಧ್ಯವಾಗಿಲ್ಲ. ಈತನ ಪತ್ತೆಗೆ ನೆರವಾಗುವ ಹಾಗೂ ಮಾಹಿತಿ ನೀಡುವವರಿಗೆ ಎರಡು ಲಕ್ಷ ರೂ. ಪಾರಿತೋಷಕವನ್ನು ಕಾಸರಗೋಡು ಪೊಲೀಸರು ಘೋಷಿಸಿದ್ದಾರೆ.
2018 ರ ಜನವರಿ 19 ರಂದು 60ವರ್ಷದ ಮಹಿಳೆಯ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದರು.ತನಿಖೆ ನಡೆಸಿದ ಪೊಲೀಸರು ಅಜೀಜ್ ಸೇರಿದಂತೆ ನಾ ಲ್ವ ರ ನ್ನು ಬಂಧಿಸಿದ್ದರು. ಅಬ್ದುಲ್ ಅಜೀಜ್ ಅಲ್ಲದೆ ಮಧೂರು ಕೋಟೆ ಕಣಿಯ ಅಬ್ದುಲ್ ಖಾದರ್, ಪಡನ್ನದ ಬಾವ ಅಜೀಜ್, ಮಾನ್ಯ ಹರ್ಷಾ ದ್ ನನ್ನು ಬಂಧಿಸಲಾಗಿತ್ತು. ಈ ನಡುವೆ ಸುಳ್ಯದ ಪ್ರಕರಣವೊಂದಕ್ಕೆ ಸಂಬಂಧ ಪಟ್ಟಂತೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಕಾಸರಗೋಡಿಗೆ ಕರೆ ತರುತ್ತಿದ್ದಾಗ ಸುಳ್ಯ ಪೇಟೆ ಬಳಿ ಆರೋಪಿ ಪೊಲೀಸರಿಂದ ತಪ್ಪಿಸಿ ಪರಾರಿಯಾಗಿದ್ದನು. ಪರಾರಿಯಾಗಿರುವ ಅಬ್ದುಲ್ ಅಜೀಜ್ ಒಂದು ವರ್ಷ ಕಳೆದರೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಇದರಿಂದ ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸಿದ್ದು, ಕೇರಳ , ಕರ್ನಾಟಕ ದ ಪ್ರಮುಖ ಕೇಂದ್ರಗಳಲ್ಲಿ ಲಗತ್ತಿಸಲಾಗಿದೆ.
ಅಬ್ದುಲ್ ಅಜೀಜ್ ವಿರುದ್ದ ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Follow us on Social media