Breaking News

ಕಾಸರಗೋಡು : ಆನ್ ಲೈನ್ ಹೊಟೇಲ್ ಫುಡ್ ಸೇವಿಸಿ ವಿದ್ಯಾರ್ಥಿನಿ ಮೃತ್ಯು

ಕಾಸರಗೋಡು : ಕೇರಳದಲ್ಲಿ ಇತ್ತೀಚಿನ ದಿನಗಳಲ್ಲಿ ವಿಷಾಹಾರ ಸೇವನೆಯ ಪ್ರಕರಣಗಳು ಜಾಸ್ತಿಯಾಗುತ್ತಿದ್ದು ಇದೀಗ ಆನ್ ಲೈನ್‌ನಲ್ಲು ಫುಡ್ ತರಿಸಿ ಸೇವಿಸಿದ್ದ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಕಾಸರಗೋಡಿನ ಪೆರುಂಬಳ ಬೇನೂರಿನಲ್ಲಿ ನಡೆದಿದೆ.

ಬೇನೂರು ತಲಕ್ಲಾಯಿಯ ಅಂಜುಶ್ರಿ ಪಾರ್ವತಿ ( 19) ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದಾಳೆ .

ಹೋಟೆಲ್ ನಿಂದ ತರಿಸಿದ್ದ ಆಹಾರ ಸೇವಿಸಿ ಅಸ್ವಸ್ಥಳಾಗಿದ್ದ ಪಾರ್ವತಿ ಗಂಭೀರ ಸ್ಥಿತಿಗೆ ತಲುಪಿದ್ದಳು.ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಿಗ್ಗೆ ಮೃತಪಟ್ಟಿದ್ದಾಳೆ.

ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಶಾಲೆಯ ಬಿ .ಕಾಂ ವಿದ್ಯಾರ್ಥಿನಿಯಾಗಿದ್ದಳು .

ಆರು ದಿನಗಳ ಹಿಂದೆ ಹೋಟೆಲೊಂದರಿಂದ ಆನ್ ಲೈನ್ ಮೂಲಕ ಖರೀದಿಸಿದ್ದ ಆಹಾರವನ್ನು ಸೇವಿಸಿದ್ದು, ಬಳಿಕ ಅಸ್ವಸ್ಥ ಗೊಂಡಿದ್ದರು ಕಾಸರಗೋಡಿನ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು .

ಹೊಸವರ್ಷದ ಹಿನ್ನಲೆಯಲ್ಲಿ ಹೋಟೆಲ್ ನಿಂದ ಆನ್ ಲೈನ್ ಮೂಲಕ ಆಹಾರ ಖರೀದಿಸಿ ಕುಟುಂಬದವರ ಜೊತೆ ಸೇವಿಸಿದ್ದು ಆಹಾರ ಸೇವಿಸಿದ್ದ ಎಲ್ಲರಲ್ಲಿ ಅಸ್ವಸ್ಥತೆ ಕಂಡುಬಂದಿತ್ತು .

ಆದರೆ ಅಂಜುಶ್ರಿ ತೀವ್ರ ಅಸ್ವಸ್ಥತೆ ಗೊಂಡ ಹಿನ್ನಲೆಯಲ್ಲಿ ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು . ಆದರೆ ಸ್ಥಿತಿ ಗಂಭೀರವಾದುರಿಂದ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಂದು ಮಹಜರು ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗುವುದು . ,ಮೇಲ್ಪರಂಬ ಠಾಣಾ ಪೊಲೀಸರು ಅಸಹಜ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ .

ಆಹಾರವನ್ನು ನಗರ ಹೊರವಲಯದ ಅಡ್ಕತ್ತಬೈಲ್ ನ ಹೋಟೆಲೊಂದರಿಂದ ಖರೀದಿಸಿದ್ದಳು .

ವರದಿ ಕೇಳಿದ ಆರೋಗ್ಯ ಸಚಿವೆ:

ವಿಷಹಾರ ಸೇವನೆ ಯಿಂದ ವಿದ್ಯಾರ್ಥಿನಿ ಮೃತಪಟ್ಟ ಹಿನ್ನಲೆಯಲ್ಲಿ ಸಮಗ್ರ ತನಿಖೆಗೆ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಆದೇಶ ನೀಡಿದ್ದಾರೆ . ಈ ಕುರಿತು ತುರ್ತು ವರದಿ ನೀಡುವಂತೆ ಆಹಾರ ಸುರಕ್ಷಾ ಆಯುಕ್ತರಿಗೆ ಆದೇಶ ನೀಡಿದ್ದಾರೆ ಜಿಲ್ಲಾ ವೈದ್ಯಾಧಿಕಾರಿಯವರಿಂದ ಸಚಿವರು ವರದಿ ನೀಡುವಂತೆ ಆದೇಶಿದ್ದಾರೆ.

ಇತ್ತೀಚೆಗಷ್ಟೇ ಕೇರಳದ 33 ವರ್ಷ ವಯಸ್ಸಿನ ನರ್ಸ್​ವೊಬ್ಬರು ಫುಡ್​ಪಾಯ್ಸನ್​​ನಿಂದ ಮೃತಪಟ್ಟಿದ್ದು ವರದಿಯಾಗಿತ್ತು. ಈ ನರ್ಸ್​ ‘ಹೋಟೆಲ್ ಪಾರ್ಕ್​’ ಎಂಬ ಹೆಸರಿನ ರೆಸ್ಟೋರೆಂಟ್​​ನಿಂದ ಅಲ್ ಫಹಾಮ್​ (ಅರೇಬಿಯನ್​ ಚಿಕನ್​) ಆರ್ಡರ್​ ಮಾಡಿ ತರಿಸಿ ತಿಂದು ಕೆಲವೇ ಹೊತ್ತಲ್ಲಿ ತೀವ್ರ ಅಸ್ವಸ್ಥರಾಗಿ ಮೃತಪಟ್ಟಿದ್ದರು.

ನರ್ಸ್​ ಸಾವಿನ ಬೆನ್ನಲ್ಲೇ ಕೇರಳ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು, ಕೊಟ್ಟಾಯಂ, ಎರ್ನಾಕುಲಂ, ಕೊಲ್ಲಂ ಮತ್ತು ತಿರುವನಂತಪುರಂ ಜಿಲ್ಲೆಗಳ ಒಟ್ಟು 40 ಹೋಟೆಲ್​​ಗಳ ಬಾಗಿಲು ಮುಚ್ಚಿಸಿ, 62 ಹೋಟೆಲ್​​/ರೆಸ್ಟೋರೆಂಟ್​ಗಳಿಗೆ ದಂಡ ವಿಧಿಸಿದ್ದರು.

ಹಾಗೇ, ರಾಜ್ಯಾದ್ಯಂತ ಎಲ್ಲ ಹೋಟೆಲ್​/ರೆಸ್ಟೋರೆಂಟ್​​ಗಳನ್ನೂ ಪರಿಶೀಲನೆ ಮಾಡಬೇಕು. ಆಹಾರ ಸುರಕ್ಷತಾ ನಿಯಮಗಳ ಪಾಲನೆ ಮಾಡುತ್ತಿಲ್ಲದ ಹೋಟೆಲ್​/ರೆಸ್ಟೋರೆಂಟ್ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಅಲ್ಲಿನ ಆರೋಗ್ಯ ಸಚಿವ ವೀಣಾ ಜಾರ್ಜ್ ಈಗಾಗಲೇ ಆದೇಶ ಕೂಡ ನೀಡಿದ್ದಾರೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×