ಕಾಸರಗೋಡು : ಅಕ್ರಮವಾಗಿ ದಾಸ್ತಾನಿರಿಸಲಾಗಿದ್ದ ಸುಮಾರು 30 ಲೋಡ್ ಗಳಷ್ಟು ಮರಳನ್ನು ಪೈವಳಿಕೆ ಸಮೀಪದ ಕೊಮ್ಮಂಗಳ ಎಂಬಲ್ಲಿಂದ ಕಾಸರಗೋಡು ಡಿ ವೈ ಎಸ್ ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೊಮ್ಮಂಗಳ ಸೋಲಾರ್ ಪಾರ್ಕ್ ಪರಿಸರದ ನಿರ್ಜನ ಪ್ರದೇಶದಲ್ಲಿ ಮರಳನ್ನು ದಾಸ್ತಾನಿರಿಸಲಾಗಿತ್ತು .ಮೂರು ದಿನಗಳ ಹಿಂದೆ ಪೈವಳಿಕೆ ಸಮೀಪದ ಕುರುಡಪದವಿನಿಂದ 15 ಲೋಡ್ ಮರಳನ್ನು ವಶಪಡಿಸಿಕೊಳ್ಳಲಾಗಿತ್ತು .
ಮಂಜೇಶ್ವರ ಠಾಣಾ ವ್ಯಾಪ್ತಿಯ ಹಲವೆಡೆ ಅಕ್ರಮವಾಗಿ ಹೊಳೆ ಗಳಿಂದ ಮರಳನ್ನು ಸಂಗ್ರಹಿಸಿ ದಾಸ್ತಾನಿಟ್ಟಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ . ಲಾಕ್ ಡೌನ್ ಸಂದರ್ಭದಲ್ಲಿ ಅಕ್ರಮ ಮರಳುಗಾರಿಕೆ ನಡೆದಿದ್ದು, ಈಗ ಒಂದೊಂದೇ ಪ್ರಕರಣ ಗಳು ಬೆಳಕಿಗೆ ಬರುತ್ತಿದೆ
Follow us on Social media