ಶಿವಮೊಗ್ಗ: ಅಯೋಧ್ಯೆಯ ರೀತಿಯಲ್ಲೇ ಕಾಶಿ ಮತ್ತು ಮಥುರಾದಲ್ಲಿ ಮಸೀದಿಗಳ ಜಾಗದಲ್ಲಿ ದೇವಸ್ಥಾನಗಳನ್ನು ನಿರ್ಮಿಸಬೇಕು ಎಂಬ ಹೇಳಿಕೆಗೆ ಈಗಲೂ ಬದ್ಧರಾಗಿರುವುದಾಗಿ ಸಚಿವ ಕೆ.ಎಸ್. ಈಶ್ವರಪ್ಪ ಪುನರುಚ್ಚರಿಸಿದ್ದಾರೆ.
ಸಂಸದ ಅಸಾದುದ್ದೀನ್ ಓವೈಸಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಈಶ್ವರಪ್ಪ, ದೇವಸ್ಥಾನಗಳ ಅಭಿವೃದ್ದಿ ಆಗಬೇಕು ಎಂಬುವುದು ಸ್ವಾತಂತ್ರ್ಯ ವೀರರ ಅಪೇಕ್ಷೆ ಆಗಿತ್ತು. ಮುಸ್ಲಿಮರನ್ನು ನೋವು ಮಾಡುವ ಉದ್ದೇಶ ನನ್ನದಲ್ಲ, ಆದರೆ ಸಂಸದ ಓವೈಸಿ ಮಥುರಾ, ಕಾಶಿಯಲ್ಲಿ ಧರ್ಮ ಸಂಸತ್ತು ಮಾಡುತ್ತಾರೆ ಹಾಗೂ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಅದು ಅವರ ಭಾವನೆ, ಆದರೆ ಮಂದಿರವಂತೂ ಆಗಬೇಕು ಎಂಬುವುದು ನನ್ನ ಆಸೆ ಎಂದಿದ್ದಾರೆ.
ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ನನ್ನ ಇಡೀ ಜೀವನವನ್ನು ಬೇಕಾದರೂ ಜೈಲಿನಲ್ಲೇ ಕಳೆಯಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ. ನಾನು ನೂರು ಬಾರಿ ಬಂಧನಕ್ಕೊಳಗಾಗಲು ಸಿದ್ಧನಾಗಿದ್ದೇನೆ. ಬೇಕಾದರೆ ಇಡೀ ಜೀವನ ಜೈಲಲ್ಲೇ ಇರುತ್ತೇನೆ. ಅಯೋಧ್ಯೆಯ ರಾಮಮಂದಿರ ಶಿಲಾನ್ಯಾಸದ ದಿನ ನನ್ನ ಭಾವನೆಯನ್ನು ಹಂಚಿಕೊಂಡಿದ್ದೇನೆ ಎಂದಿದ್ದಾರೆ.
Follow us on Social media