ಕಾರ್ಕಳ : ತಲೆದಿಂಬಿನ ವಿಚಾರದಲ್ಲಿ ಪತ್ನಿಗೆ ಕುಡುಕ ಪತಿಯೊಬ್ಬ ಪಕ್ಕದಲ್ಲಿ ಇದ್ದ ಖುರ್ಚಿಯಿಂದ ತಲೆ ಹೊಡೆದು ಗಾಯಗೊಳಿಸಿರುವ ಘಟನೆ ನಲ್ಲೂರು ಪಕ್ಕಿಬೆಟ್ಟು ಎಂಬಲ್ಲಿ ನಡೆದಿದೆ.
ಪ್ರಮೀಳಾ(35) ಘಟನೆಯಲ್ಲಿ ಗಾಯಗೊಂಡವರು. ಪತಿ ಸಂದೇಶ್ ಹಲ್ಲೆ ನಡೆಸಿದ ಆರೋಪಿ. ಮೇ 29ರಂದು ಈ ಘಟನೆ ಮನೆಯಲ್ಲಿ ನಡೆದಿದೆ. ವಿಪರೀಪ ಮದ್ಯಸೇವನೆಗೈದಿದ್ದ ಎನ್ನಲಾದ ಸಂದೇಶ ಪತ್ನಿ ಪ್ರಮೀಳಾ ನಡುವೆ ಜಗಳ ಉಂಟಾಗಿತ್ತು. ರಾತ್ರಿ 7.30ಕ್ಕೆ ಮಕ್ಕಳು ಮಲಗುವ ತಲೆ ದಿಂಬಿನ ವಿಚಾರದಲ್ಲಿ ಅವರಿಬ್ಬರ ನಡುವೆ ವಾಗ್ವಾದ ಉಂಟಾಗಿದ್ದು, ಅದೇ ಸಂದರ್ಭದಲ್ಲಿ ಪಕ್ಕದಲ್ಲಿ ಇದ್ದ ಕುರ್ಚಿಯಿಂದ ಪತ್ನಿಯ ತಲೆಗೆ ಹೊಡೆದು ಗಾಯಗೊಳಿಸಲಾಗಿದೆ.
ಗಾಯಾಳು ಪ್ರಮೀಳಾ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸುದಾಖಲಾಗಿದೆ.
Follow us on Social media