ಕಾರ್ಕಳ: ವಿಕಲಚೇತನ ಪುತ್ರನನ್ನು ಬಾವಿಗೆ ತಳ್ಳಿ ತಂದೆಯೂ ಆತ್ಮಹತ್ಯೆ ಮಾಡಿಕೊಂಡಹೃದಯ ವಿದ್ರಾವಕ ಘಟನೆ ತಾಲೂಕು ಕೆರ್ವಾಶೆಯ ಗ್ರಾಮದಲ್ಲಿ ನಡೆದಿದೆ.
ಪಾಚರಬೆಟ್ಟು ಕೃಷ್ಣ ಪೂಜಾರಿ ಎಂಬವರು ತನ್ನ ವಿಕಲಚೇತನ ಪುತ್ರ ದಿಪೇಶ್ (26) ಎಂಬವರನ್ನು ಮನೆ ಸಮೀಪದ ಬಾವಿಗೆ ತಳ್ಳಿ ತಾನೂ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೃಷ್ಣ ಪೂಜಾರಿ ಅವರ ಪತ್ನಿ ಅನಾರೋಗ್ಯಕ್ಕೀಡಾಗಿದ್ದು, ಇದ್ದ ಓರ್ವ ಮಗನೂ ವಿಕಲಚೇತನ ಎಂದು ಮನನೊಂದ ಕೃಷ್ಣ ಪೂಜಾರಿ ಈ ಕೃತ್ಯವೆಸಗಿದ್ದಾರೆ ಎನ್ನಲಾಗುತ್ತಿದೆ.
ಘಟನಾ ಸ್ಥಳಕ್ಕೆ ಉಡುಪಿ ಎಸ್‌ಪಿ ವಿಷ್ಣುವರ್ಧನ್, ಕಾರ್ಕಳ ಡಿವೈಎಸ್‌ಪಿ ವಿಜಯ ಪ್ರಸಾದ್, ವೃತ್ತ ನಿರೀಕ್ಷಕ ಸಂಪತ್ ಕುಮಾರ್, ಅಜೆಕಾರು ಎಸ್‌ಐ ಶುಭಕರ್, ಸಿಬ್ಬಂದಿ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.
Follow us on Social media