ಜನಪ್ರಿಯ ಟಿವಿ ಶೋ ‘ಸಾರಾಭಾಯ್ ವರ್ಸಸ್ ಸಾರಾಭಾಯ್’ ಪಾತ್ರದ ಮೂಲಕ ಖ್ಯಾತಿ ಪಡೆದ ನಟಿ ವೈಭವಿ ಉಪಾಧ್ಯಾಯ ಅವರು ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಈ ದುಃಖದ ಸುದ್ದಿಯನ್ನು ನಿರ್ಮಾಪಕ ಜೆಡಿ ಮಜೇಥಿಯಾ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿರುವ ಅವರು, ಈ ದುರ್ಘಟನೆ ಉತ್ತರ ಭಾರತದಲ್ಲಿ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.
ಜೀವನವು ತುಂಬಾ ಅನಿರೀಕ್ಷಿತವಾಗಿದೆ. ಸಾರಾಭಾಯ್ ವರ್ಸಸ್ ಸಾರಾಭಾಯಿಯಲ್ಲಿ ಜಾಸ್ಮಿನ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಉತ್ತಮ ನಟಿ ಆತ್ಮೀಯ ಸ್ನೇಹಿತೆ ವೈಭವಿ ಉಪಾಧ್ಯಾಯ ಅವರು ನಿಧನರಾದರು ಎಂದು ಬರೆದಿದ್ದಾರೆ.
ಇಂದು (ಮೇ 24) ವೈಭವಿ ಶವವನ್ನು ಮುಂಬೈಗೆ ಕರೆತರಲಾಗುತ್ತಿದೆ. ಇಲ್ಲಿ ಅವರ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ. ವೈಭವಿ 2020 ರಲ್ಲಿ ‘ಛಪಾಕ್’ ಚಿತ್ರ ಮತ್ತು ‘ತಿಮಿರ್’ (2023) ನಲ್ಲಿ ದೀಪಿಕಾ ಪಡುಕೋಣೆ ಜೊತೆಗೆ ಕೆಲಸ ಅವರು ಮಾಡಿದ್ದರು.
Follow us on Social media