ಬೆಂಗಳೂರು: ಕಾರವಾರದಲ್ಲಿ ಉನ್ನತ ದರ್ಜೆಯ ಅಂತಾರಾಷ್ಟ್ರೀಯ ಮಟ್ಟದ ನೂತನ ಕ್ರಿಕೆಟ್ ಕ್ರೀಡಾಂಗಣ ತಲೆ ಎತ್ತುವ ಸಾಧ್ಯತೆ ದಟ್ಟವಾಗಿದೆ. ಈ ಸಂಬಂಧ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೇಸ್ ಸಿಎ) ಅಧ್ಯಕ್ಷ ರೋಜರ್ ಬಿನ್ನಿ ಶುಕ್ರವಾರ ಕಾರ್ಮಿಕ ಹಾಗೂ ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ಈ ವೇಳೆ ಸಚಿವರು,” ಕಾರವಾರದಲ್ಲಿ ನೂತನ ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ಕೇಸ್ ಸಿಎಗೆ ನೀಡಲಾಗುವುದು, ” ಎಂದು ತಿಳಿಸಿದ್ದಾರೆ. ” ಮೈದಾನ ನಿರ್ಮಾಣಕ್ಕೆ ಹನ್ನೊಂದೂವರೆ ಎಕರೆ ಜಾಗವನ್ನು ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಕೊರೊನಾ ಹತೋಟಿಗೆ ಬಂದ ಕೂಡಲೇ ಜಾಗದ ರಿಜಿಸ್ಟ್ರೇಷನ್ ನಡೆಯಲಿದ್ದು, ಆದಷ್ಟು ಬೇಗ ಕ್ರೀಡಾಂಗಣದ ಕಾಮಗಾರಿಯನ್ನು ಆರಂಭಿಸಲು ಯೋಜಿಸುತ್ತಿದ್ದೇವೆ ಎಂದು ಕೇಸ್ ಸಿಎ ಮೂಲಗಳು ತಿಳಿಸಿದೆ.
Follow us on Social media