Breaking News

ಕಲಬುರಗಿಯಲ್ಲಿ 52 ವರ್ಷದ ವ್ಯಕ್ತಿಗೆ ಕೊರೊನಾ ದೃಢ: ಸೋಂಕಿತರ ಸಂಖ್ಯೆ 64ಕ್ಕೇರಿಕೆ

ಕಲಬುರಗಿ : ಸೂರ್ಯ ನಗರಿ ಕಲಬುರಗಿಯಲ್ಲಿ‌ ಕೊರೊನಾ ಸೋಂಕು‌ ಬಿಸಿಲು ತಾಪಕ್ಕಿಂತ ಹೆಚ್ಚಾಗಿ ಏರಿಕೆ ಆಗುತ್ತಿದ್ದು, ಸದ್ಯ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 64 ಏರಿಕೆ‌ ಕಂಡಿದೆ‌.
ಬುಧವಾರ ಕಲಬುರಗಿ ನಗರದ ರೋಗಿ ಸಂಖ್ಯೆ-610ರ ನೇರ ಸಂಪರ್ಕಕ್ಕೆ ಬಂದ ಗಾಜೀಪುರ ಪ್ರದೇಶದ 52 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಪೀಡಿತ 64 ರೋಗಿಗಳಲ್ಲಿ 6 ಜನ ನಿಧನ‌ರಾಗಿದ್ದು, 24 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ‌. ಉಳಿದಂತೆ 34 ರೋಗಿಗಳಿಗೆ ಚಿಕಿತ್ಸೆ‌ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×