ಕಾಸರಗೋಡು : ಕರ್ನಾಟಕದಿಂದ ತರಕಾರಿ, ಹಣ್ಣು ಹಂಪಲು ಮತ್ತು ಮೀನು ಹೇರಿಕೊಂಡು ಬರುವ ವಾಹನಗಳಲ್ಲಿನ ಸರಕುಗಳನ್ನು ಗಡಿ ಪ್ರದೇಶಗಳಲ್ಲಿ ಸಂಬಂಧಪಟ್ಟ ಇತರ ವಾಹನಗಳಿಗೆ ಹಸ್ತಾಂತರಿಸಬೇಕು ಎಂದು ಜಿಲ್ಲಾಧಿಕಾರಿ ಡಾ . ಸಜಿತ್ ಬಾಬು ತಿಳಿಸಿದ್ದಾರೆ.
ಅಲ್ಲದೆ ಆರೋಗ್ಯ ಇಲಾಖೆಯ ನಿಬಂಧನೆಗಳನ್ನು ಪಾಲಿಸಬೇಕು ಮಾಸ್ಕ್ , ಗ್ಲೌಸ್, ಸಾನಿಟೈಸರ್ ಬಳಕೆ ಕಡ್ಡಾಯವಾಗಿ ಬಳಸಿ, ನಿಬಂಧನೆ ಪಾಲಿಸಿ ಸರಕನ್ನು ಹಸ್ತಾಂತರಿಸಬೇಕು . ಆದೇಶ ಉಲ್ಲಂಘಿಸಿದ್ದಲ್ಲಿ ಮೊಕದ್ದಮೆ ದಾಖಲಿಸಿ , ವಾಹನ ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ
ಕರ್ನಾಟಕದಿಂದ ಸರಕು ವಾಹನಗಳಲ್ಲಿ ಬರುವವರಿಗೆ ಕಾಸರಗೋಡುಜಿಲ್ಲೆಗೆ ಪ್ರವೇಶ ಇಲ್ಲ . ಕರ್ನಾಟಕದಿಂದ ವಾಹನಗಳಲ್ಲಿ ಬರುವ ಸರಕನ್ನು ಗಡಿಯಲ್ಲಿ ಕಾಸರಗೋಡಿನ ವಾಹನಗಳಿಗೆ ತುಂಬಿಸಬೇಕು . ಸರಕು ತರುವ ಕಾಸರಗೋಡಿನ ವಾಹನ ಚಾಲಕ , ಸಿಬಂದಿಗಳು ವಾರಕ್ಕೊಮ್ಮೆ ಸಮೀಪದ ಪ್ರಾಥಮಿಕ ಆರೋಗ್ಯ ಕೇದ್ರದಲ್ಲಿ ತಪಾಸಣೆಗೊಳಗಾಗಿ ಕೋವಿಡ್ ಲಕ್ಷಣ ಹೊಂದಿಲ್ಲ ಎಂದು ಸರ್ಟಿಫಿಕೇಟ್ ಪಡೆಯಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Follow us on Social media