ಮಂಗಳೂರು : ಕೋವಿಡ್ -19 ಹರಡುವಿಕೆಯ ಮುನ್ನೆಚ್ಚರಿಕೆ ಕ್ರಮವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಸೋಮವಾರ ಪ್ರೀಮಿಯಂ, ಎಸಿ ಯೇತರ ಸ್ಲೀಪರ್, ರಾಜಹಂಸ ಮತ್ತು ಎಕ್ಸ್ಪ್ರೆಸ್ ಬಸ್ ಸೇವೆಗಳನ್ನು ಮಂಗಳೂರಿನಿಂದ ಬೆಂಗಳೂರು ಮತ್ತು ಕಾಸರಗೋಡಿಗೆ ಕಡಿತಗೊಳಿಸಲು ನಿರ್ಧರಿಸಿದೆ.
ಕೆಎಸ್ಆರ್ ಟಿಸಿಯ ಕೇಂದ್ರ ಕಚೇರಿಯ ನಿರ್ದೇಶನದಂತೆ ಸೇವೆಗಳಲ್ಲಿ ಕಡಿತಗೊಳಿಸಲಾಗಿದೆ.
ಬೆಂಗಳೂರಿಗೆ 40 ಟ್ರಿಪ್ಗಳನ್ನು ಕಡಿತಗೊಳಿಸಲು ನಿಗಮ ನಿರ್ಧರಿಸಿದೆ. ಕಾಸರಗೋಡಿಗೆ ಟ್ರಿಪ್ ಗಳನ್ನು 40 ರಿಂದ 35 ಕ್ಕೆ ಇಳಿಸಲಾಗಿದೆ. ಇದರಲ್ಲಿ ಮೈಸೂರು ಮತ್ತು ಧರ್ಮಸ್ಥಳ ಸೇವೆಗಳ ಕಡಿತವೂ ಸೇರಿದೆ ಎಂದು ಕೆಎಸ್ಆರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಕ ಎಸ್ ಎನ್ ಅರುಣ್ ತಿಳಿಸಿದ್ದಾರೆ.