ನವದೆಹಲಿ: ಇಂಗ್ಲೆಂಡ್ ನಲ್ಲಿ ನಡೆದಿದ್ದ ಮೂರನೇ ವಿಶ್ವಕಪ್ ಟೂರ್ನಿಯಲ್ಲಿ ಅಚ್ಚರಿಯ ಫಲಿಯತಾಂಶ ನೀಡಿದ್ದ ಭಾರತ ತಂಡ, ಮೊದಲ ಬಾರಿ ಚಾಂಪಿಯನ್ ಮುಕುಟವನ್ನು ಮುಡಿಗೇರಿಸಿಕೊಂಡಿತ್ತು. ಈ ಮೂಲಕ ವಿಶ್ವದ ಗಮನವನ್ನು ತನ್ನತ್ತ ಸೆಳೆಯಿತು.
ಹ್ಯಾಟ್ರಿಕ್ ಪ್ರಶಸ್ತಿಯ ಕನಸಿನಲ್ಲಿದ್ದ ವಿಂಡೀಸ್ ತಂಡದ ಕನಸಿಗೆ ಬ್ರೇಕ್ ಹಾಕಿದ ಟೀಮ್ ಇಂಡಿಯಾ ಆಟಗಾರರು, ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಲಾರ್ಡ್ಸ್ ಅಂಗಳದಲ್ಲಿ ಅಮೋಘ ಪ್ರದರ್ಶನ ನೀಡಿದ ಕಪೀಲ್ ದೇವ್ ಮುಂದಾಳತ್ವದ ಭಾರತ ಕಪ್ ಎತ್ತಿ ಸಂಭ್ರಮಿಸಿತ್ತು. ಈ ಸುವರ್ಣ ಘಳಿಗೆಗೆ ಗುರುವಾರ (ಜೂನ್ 25)ಕ್ಕೆ 37 ವರ್ಷ ತುಂಬುತ್ತಿವೆ.
60 ಓವರ್‌ಗಳ ಪಂದ್ಯದಲ್ಲಿ ವಿಂಡೀಸ್ ಕ್ಯಾಪ್ಟನ್ ಕ್ಲೈವ್ ಲಾಯ್ಡ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದ್ದರು. ಅದರಂತೆ ಭಾರತ ಬ್ಯಾಟಿಂಗ್ ಗೆ ಇಳಿದಿದ್ದರೂ ಸಹ ಕೇವಲ 183 (54.4 ಓವರ್) ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡಿತ್ತು. ಭಾರತದ ಪರ ಮಾಚಾರಿ ಶ್ರೀಕಾಂತ್ ಮಾತ್ರ 38 ರನ್ ಗಳಿಸಿದ್ದು ( 57 ಎಸೆತ) ಅತ್ಯದ್ಭುತ ಸಾಧನೆ ಆಗಿತ್ತು.
ಆದರೆ ಅಂದಿನ ಟೀಂ ಇಂಡಿಯಾ ನಾಯಕನಾಗಿದ್ದ ಕಪಿಲ್ ದೇವ್ ಏನಾದರೂ ಸರಿ ಪಂದ್ಯ ಗೆಲ್ಲಬೇಕೆಂದು ಛಲದೊಡನೆ ಫೀಲ್ಡಿಗಿಳಿದಿದ್ದರು. ಅಲ್ಲದೆ ಅದಾಗಲೇ ಎರಡು ಬಾರಿ ಚಾಂಪಿಯನ್ ಪಟ್ತವೇರಿದ್ದ ವೆಸ್ಟ್ ಇಂಡೀಸ್ ಅನ್ನು 43 ರನ್ ಗಳ ಅಂತರದಲ್ಲಿ ಮಣಿಸಿ ವಿಶ್ವಕಪ್ ಪ್ರಶಸ್ತಿ ತಮ್ಮದಾಗಿಸಿಕೊಂಡು ಐತಿಹಾಸಿಕ ಸಾಧನೆಗೆ ಕಾರಣವಾಗಿದ್ದರು.ವೆಸ್ಟ್ ಇಂಡೀಸ್ 52 ಓವರ್‌ಗಳಲ್ಲಿ 140 ರನ್ ಪಡೆಯುವಷ್ಟರಲ್ಲಿ ಎಲ್ಲಾ ವಿಕೆಟ್ ಗಳೂ ಉರುಳಿಯಾಗಿತ್ತು.
ಜಾಗತಿಕ ಮಟ್ಟದಲ್ಲಿ ಭಾರತ ಕ್ರಿಕೆಟ್ ನ ದಿಕ್ಕು ಬದಲಿಸಿದ ಈ ಪ್ರಥಮ ವಿಶ್ವಕಪ್ ವಿಜಯವನ್ನು ನಾವೆಂದಿಗೂ ಮರೆಯಲು ಸಾಧ್ಯವಿಲ್ಲ.
Follow us on Social media